ಮೆಪ್ಪಾಡಿ: ಸೇವೆಗಾಗಿ ವಯನಾಡಿಗೆ ಬರುವ ಸಂಘಟನೆಗಳನ್ನು ಅಲ್ಲಿಂದ ಓಡಿಸಬಾರದು ಎಂದು ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ಹೇಳಿರುವರು.
ಸೇವೆಗಾಗಿ ಬರುವ ಯುವಕರನ್ನು ಬೇರೆ ಬೇರೆ ಅಗತ್ಯಗಳಿಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ನಿಯೋಜಿಸಲು ಸಾಧ್ಯವಿಲ್ಲ ಎಂಬುದು ಸತ್ಯ. ಮೆಪ್ಪಾಡಿ ಮತ್ತು ಚುರಲ್ಮಳಕ್ಕೆ ಭೇಟಿ ನೀಡಿದ ಬಳಿಕ ಸಂದೀಪ್ ವಾಚಸ್ಪತಿ ಈ ಬಗ್ಗೆ ಮಾತನಾಡುತ್ತಿದ್ದರು.
ಪ್ರತಿಯೊಂದು ದುರಂತವೂ ಮಾನವ ಭ್ರಾತೃತ್ವದ ಹೊಸ ಮಾದರಿಗಳನ್ನು ಸೃಷ್ಟಿಸುತ್ತದೆ. ವಯನಾಡು ಮೆಪ್ಪಾಡಿ ಅದಕ್ಕಿಂತ ಭಿನ್ನವಾಗಿಲ್ಲ. ಸೇವಾ ಭಾರತಿ, ಯುವ ಮೋರ್ಚಾ, ಡಿವೈಎಫ್‌ಐ, ಯೂತ್ ಕಾಂಗ್ರೆಸ್, ಯೂತ್ ಲೀಗ್, ಎಸ್‌ವೈಎಸ್ ಮತ್ತು ಕೆಎಂಸಿಸಿ ಎಲ್ಲರೂ ಅನ್ಯ ಭಾವಗಳಿಲ್ಲದೆ ಮೆಪ್ಪಾಡಿ ಮತ್ತು ಚುರಲ್‌ಮಲÀದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಆಗಲೂ ಅವರ ಬಂಧುತ್ವ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಮರ್ಥ್ಯವಿರುವ ಸರ್ಕಾರದ ಕೊರತೆ ಎಲ್ಲೆಲ್ಲೂ ಕವಿದಿದೆ.
ಕೇರಳದ ವಿವಿಧ ಭಾಗಗಳಿಂದ ತಮ್ಮ ಸಹಜೀವಿಗಳಿಗೆ ಸಹಾಯ ಮಾಡಲು ಅಥವಾ ತಮ್ಮ ಕರ್ಮ ಸಾಮರ್ಥ್ಯವನ್ನು ಸೃಜನಶೀಲವಾಗಿ ಬಳಸಿಕೊಳ್ಳಲು ಬಂದಿರುವ ವಿವಿಧ ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳ ಸ್ವಯಂಸೇವಕರನ್ನು ಒಟ್ಟುಗೂಡಿಸಲು ಯಾರೂ ಇಲ್ಲದ ಪರಿಸ್ಥಿತಿ ಎದ್ದು ಕಾಣುತ್ತಿದೆ.
ಸೇವೆಗೆ ಬರುವ ಪ್ರತಿಯೊಂದು ಸಂಸ್ಥೆಗೆ ಒಂದೊAದು ಕಾರ್ಯವನ್ನು ವಹಿಸಿದರೆ ಸರ್ಕಾರಕ್ಕೆ ಆರ್ಥಿಕ ಮಾನವ ಸಂಪನ್ಮೂಲದ ಉಳಿತಾಯವೂ ಅಪಾರ. ಇದು ಕೇರಳದ ಇತಿಹಾಸದಲ್ಲಿ ಹೊಸ ರಾಜಕೀಯ ಸೇವಾ ಸಂಸ್ಕೃತಿಯನ್ನು ಸೃಷ್ಟಿಸಬಹುದಲ್ಲವೇ? ಇದು ಸ್ವರ್ಣ ಲೇಪನದಲ್ಲಿ ಬರೆಯಲಾಗುವ ಕೇರಳ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದರೂ ಮುತುವರ್ಜಿ ವಹಿಸಬೇಕು. ಆದರೆ ಸೇವೆಗಾಗಿ ಬರುವ ಸಂಸ್ಥೆಗಳನ್ನು ಅಲ್ಲಿಂದ ಓಡಿಸಬಾರದು. ಸಂದೀಪ್ ಹೇಳಿರುವರು.