HEALTH TIPS

ಪ್ರಕೃತಿಯ ಪೋಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು-ಆಟಿ ಸಮಭ್ರಮ ಕಾರ್ಯಖ್ರಮದಲ್ಲಿ ರಘು ಇಡ್ಕಿದು ಅಭಿಪ್ರಾಯ

          ಪೆರ್ಲ: ಪ್ರಕೃತಿಯ ಸಂರಕ್ಷಣೆಯಿಂದ ಮಾತ್ರ ಜೀವಸಂಕುಲದ ಪೋಷಣೆ ಸಾಧ್ಯ ಎಂಬುದಾಗಿ ಸಾಹಿತಿ, ಉಪನ್ಯಸಕ ರಘು ಇಡ್ಕಿದು ತಿಳಿಸಿದ್ದರೆ. ಅವರು ಪೆರ್ಲ ಏಕದಂತ ಬಳಗ ಹಾಗೂ ಏಕದಂತ ಕಲಾವಿದೆರ್ ಕುಡ್ಲ ವತಿಯಿಂದ ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಟಿ ಸಂಭ್ರಮ, ಸನ್ಮಾನ ಸಮಾರಂಭದಲ್ಲಿ  ಆಟಿ ಮಾಸದ ಬಗ್ಗೆ ಉಪನ್ಯಾಸ ನೀಡಿದರು. 

           ಈ ಭೂಮಿ ನಮಗೆ ಎಲ್ಲವನ್ನೂ ನೀಡಿದೆ. ಔಷಧೀಯ ಗುಣ ಅಡಕವಾಗಿರುವ  ಗಿಡ, ಸೊಪ್ಪು, ಬೇರುಗಳು ಲಭ್ಯವಿದೆ. ಪ್ರಕೃತಿಯನ್ನು ಪ್ರೀತಿಸಿ, ಅದರೊಂದಿಗೆ ಬದುಕು ಸಾಧಿಸುವುದನ್ನು ನಾವು ಕಲಿತುಕೊಳ್ಳಬೇಕಾಗಿದೆ. ಪ್ರಕೃತಿಯ ಅತಿಯಾದ ಶೋಷಣೆ ಇಂದಿನ ದುರಂತಗಳಿಗೆ ಕಾರಣವಾಗುತ್ತಿದೆ. ಪ್ರಕೃತಿಯ ಪೋಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು. ಆಟಿ ಮಾಸದ ಆಹಾರಪದಾರ್ಥ, ಅದರಲ್ಲಿ ಅಡಕವಾಗಿರುವ ವಿಶೇಷ ಔಷಧೀಯ ಸತ್ವಗಳು, ಸೇವಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

          ಪೆರ್ಲದ ಹೊಂಬೆಳಕು ಟ್ಯೂಷನ್ ಸೆಂಟರ್ ಪ್ರಾಂಶುಪಾಲ, ಜಾನಪದ ತಜ್ಞ ಡಾ. ಕಿಶೋರ್‍ಕುಮಾರ್ ರೈ ಶೇಣಿ ಸಮಾರಂಭ ಉದ್ಘಾಟಿಸಿದರು. ಸಾಮಾಜಿಕ, ಧಾರ್ಮಿಕ ಮುಖಂಡ ಟಿ. ಪ್ರಸಾದ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪುರುಷೋತ್ತಮ ಪೆರ್ಲ, ಕಲಾಪೋಷಕ ಎಂ.ಆರ್ ಮಣಿ ಪೆರ್ಲ ಉಪಸ್ಥಿತರಿದ್ರು. ಈ ಸಂದರ್ಭ ನಾಟಿ ವೈದ್ಯೆ ನಳಿನಾಕ್ಷೀ ರೈ ಪೆರಿಯಾಲ್ ಹಾಗೂ ಶ್ರೀ ಮಹಮ್ಮಾಯಿ ಅಮ್ಮನವರ ಪಾತ್ರಿ ಐತ್ತಪ್ಪ ನಾಯ್ಕ್ ಬಜಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಏಕದಂತ ಬಳಗದ ರಮೇಶ್ ಕುರಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಂತ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮಿತ್ರಾ ಕುರಡ್ಕ ವಂದಿಸಿದರು. 

ಕಾರ್ಯಕ್ರಮದ ಅಂಗವಾಗಿ ಏಕದಂತ ಬಳಗದಿಂದ ಕುಣಿತ ಭಜನೆ, ನೃತ್ಯ ಕಾರ್ಯಕ್ರಮ ನಡೆಯಿತು. ಆಟಿ ಮಾಸದ ವಿಶೇಷ ತಿನಿಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries