ಮಂಜೇಶ್ವರ: ಉದ್ಯಾವರ ಹತ್ತನೇ ಮೈಲ್ ಇಶಾಹತುಲ್ ಉಲೂಂ ಮದರಸದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮದರಸದ ಅಧ್ಯಕ್ಷ ಹನೀಫ್ ಕಜೆ ವಹಿಸಿದ್ದರು. ಮದರಸ ಸದರ ಮುಹಲ್ಲಿಂ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಧ್ವಜಾರೋಹಣಗೈದರು. ಅಹಮದ್ ಸಾಧಿಕ್ ಸಅದಿ ಪ್ರಾರ್ಥನೆಗೈದು ಮುಖ್ಯ ಭಾಷಣ ಮಾಡಿದರು. ಆದಮ್ ಆಫಿಲ್ ದೇಶಭಕ್ತಿ ಗೀತೆ ಹಾಡಿ, ಮೊಹಮ್ಮದ್ ದಿಯಾನ್ ದಿನದ ಮಹತ್ವದ ಬಗ್ಗೆ ಮಾಡಿದರು. ಮಜೀದ್, ಸಲಾಹುದ್ದೀನ್, ನವಾಜ್ ಶುಭಾಶಂಸನೆಗೈದರು. ಕಾರ್ಯದರ್ಶಿ ಶರೀಫ್ ಸ್ವಾಗತಿಸಿ, ಹಾರಿಸ್ ಸಅದಿ ವಂದಿಸಿದರು.