ಕಣ್ಣೂರು: ಜಿಲ್ಲೆಯಲ್ಲಿ ನಿಪಾ ಭೀತಿ ಕೊನೆಗೂ ನಿವಾರಣೆಯಾಗಿದೆ. ರೋಗಲಕ್ಷಣಗಳಿಂದಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದ ಇಬ್ಬರ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಇಬ್ಬರಿಗೂ ನಿಪಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಅವರು ಹಣ್ಣಿನ ಅಂಗಡಿಯಲ್ಲಿ ಕೆಲಸಗಾರರಾಗಿದ್ದರು. ಶುಕ್ರವಾರವೂ ಇವರು ನಿಗಾದಲ್ಲಿದ್ದರು.
ಈ ಹಿಂದೆ ಕೋಝಿಕ್ಕೋಡ್ ಜಿಲ್ಲೆಯನ್ನೂ ನಿಪಾ ಮುಕ್ತ ಎಂದು ಘೋಷಿಸಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.