ಉಪ್ಪಳ: ನಿವೃತ್ತ ಮುಖ್ಯೋಪಾಧ್ಯಾಯ ಬಾಯಾರು ಕುರುವೇರಿ ನಿವಾಸಿ ಎಸ್.ನಾರಾಯಣ ಭಟ್(85)ಶನಿವಾರ ಮುಂಜಾನೆ ನಿಧನರಾದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದರು.
ಮೃತರು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಮಾಜಿ ಅಧ್ಯಕ್ಷರೂ, ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಸದಸ್ಯರಾಗಿದ್ದರು. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರೂ ಆಗಿದ್ದು ಬಳಿಕ ಎಡಚಿಂತನೆಯತ್ತ ವಾಲಿದ್ದರು.ಮೃತರ ಪತ್ನಿ ಈ ಹಿಂದೆಯೇ ನಿಧನರಾಗಿದ್ದರು. ಪುತ್ರ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.