HEALTH TIPS

ಕಟ್ಟಡದಲ್ಲಿರುವ ಲಿಫ್ಟ್ ಗೂ ಪರವಾನಗಿ ಅಗತ್ಯ: ನವೀಕರಣ ಮಾಡದವರ ವಿರುದ್ಧ ಕ್ರಮ

               ತಿರುವನಂತಪುರಂ:  ಕಟ್ಟಡಗಳಿಗೆ  ಒಮ್ಮೆ ಲಿಫ್ಟ್ ಅಳವಡಿಸಿದರೆ ಇನ್ನು ಹಿಂತಿರುಗಿ ನೋಡಬೇಕಿಲ್ಲ ಎಂದುಕೊಂಡವರಿಗೆ ಇನ್ನು ಅಷ್ಟು ಸುಲಭವಲ್ಲ. 

              ಅವಧಿ ಮುಗಿದರೂ ಲಿಫ್ಟ್ ಲೈಸೆನ್ಸ್ ನವೀಕರಿಸದವರ ವಿರುದ್ಧ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರೇಟ್ ಎಚ್ಚರಿಕೆ ನೀಡಿದೆ.

               ಇತ್ತೀಚೆಗೆ, ಎಲಿವೇಟರ್‍ಗಳನ್ನು ಒಳಗೊಂಡ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರವಾನಗಿ ಷರತ್ತುಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ. ಹಲವು ಸಂಸ್ಥೆಗಳು ಪರವಾನಗಿ ನವೀಕರಿಸದೆ ಲಿಫ್ಟ್‍ಗಳನ್ನು ನಡೆಸುತ್ತಿರುವುದು ತಹಶೀಲ್ದಾರರ ಗಮನಕ್ಕೆ ಬಂದಿದೆ.

               ಕೇರಳ ಲಿಫ್ಟ್‍ಗಳು ಮತ್ತು ಎಸ್ಕಲೇಟರ್‍ಗಳ ಕಾಯಿದೆ 2013 ರ ಅಡಿಯಲ್ಲಿ, ಲಿಫ್ಟ್‍ಗಳ ಕಾರ್ಯಾಚರಣೆಗೆ ಪರವಾನಗಿ ಕಡ್ಡಾಯವಾಗಿದೆ. ಮೂರು ಮಹಡಿಗಳಿಗಿಂತ ಹೆಚ್ಚಿನ ಕಟ್ಟಡಗಳಿಗೆ ಬಳಸುವ ಲಿಪ್ಟ್ ಗಳಿಗೆ ಪರವಾನಿಗೆ ಅತ್ಯಗತ್ಯ.  ಅಗ್ನಿಶಾಮಕ ರಕ್ಷಣಾ ಸೇವೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರದೊಂದಿಗೆ ಅವುಗಳನ್ನು ಸ್ಥಾಪಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಬೇಕು. ಪೂರ್ಣಗೊಂಡ ನಂತರ ಮತ್ತು ಅಗ್ನಿ ರಕ್ಷಾ ಸೇನೆಯಿಂದ ತಪಾಸಣೆಯ ನಂತರ, ಕಾರ್ಯಾಚರಣೆಗೆ ಅನುಮತಿ ನೀಡಲಾಗುವುದು. ಎಲೆಕ್ಟ್ರಿಕಲ್ ಇನ್ಸ್ಪೆಕ್ಟರೇಟ್ನಿಂದ ಪರವಾನಗಿ ನೀಡಲಾಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅದನ್ನು ನವೀಕರಿಸಬೇಕು. ಇನ್ನೂ ಪರವಾನಗಿ ನವೀಕರಿಸದವರಿಗೆ ಇನ್ಸ್‍ಪೆಕ್ಟರೇಟ್ ಅದಾಲತ್ ನಡೆಸಲಾಗುತ್ತದೆ. ಲಿಫ್ಟ್ ಒಂದಕ್ಕೆ 3310 ಪಾವತಿಸಿ  ಅದಾಲತ್ ನಲ್ಲಿ ಪರವಾನಗಿಯನ್ನು ನವೀಕರಿಸಬೇಕು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries