ಮಂಜೇಶ್ವರ: ತೀವ್ರ ಮಳೆಯ ಕಾರಣ ದುರಿತ ಬಾಧಿತ ಮಂಚೇಶ್ವರ ತಾಲೂಕು ವ್ಯಾಪ್ತಿಯ ಕೊಡ್ಲಮೊಗರು ಗ್ರಾಮದ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಇನ್ಬಾಶೇಖರ್ ಭೇಟಿ ನೀಡಿದರು. ಮಣ್ಣಿನ ಸವಕಳಿ ಅಳತೆ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊಡ್ಲಮೊಗರು ಗುಡ್ಡ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಈ ಪ್ರದೇಶದಲ್ಲಿ ಆರು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಹವಾಮಾನವು ಅನುಕೂಲಕರವಾಗಿದ್ದರೆ ಅವರು ಹಿಂತಿರುಗಬಹುದು ಎಂದು ಸೂಚಿಸಲಾಯಿತು.
ಬಾಡೂರು ಗ್ರಾಮದ ಅಂಗಡಿಮೊಗರು ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆಗೆ ಬಿದ್ದ ಪ್ರದೇಶಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ಶಾಲೆಯ ಪರಿಸರದಲ್ಲೇ ಈ ಭೂಕುಸಿತವಾಗಿರುವುದರಿಂದ ವಿದ್ಯಾರ್ಥಿಗಳು ಬರುವ ರಸ್ತೆಗೂ ಅಪಾಯ ಎದುರಾಗಿದೆ.