ಕಾಸರಗೋಡು: ಅಖಿಲ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಕಾಸರಗೋಡು ಪೂರ್ವ ಘಟಕ ಸಮಿತಿ ನೇತೃತ್ವದಲ್ಲಿ ಎಕೆಪಿಎ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಾರಂಗಪಾಣಿ ಸಂಸ್ಮರಣಾ ದಿನಾಚರಣೆ ಕಾಸರಗೋಡಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ತಾಲೂಕು ಜನರಲ್ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಪರಿಚಾರಕರಿಗೆ ಆಹಾರ ಪದಾರ್ಥ ವಿತರಣೆ ನಡಸಲಾಯಿತು. ಪೂರ್ವ ಘಟಕದ ಅಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಸುಜಿತ್ ಇನ್ಫೋಕಸ್, ಪಿಆರ್‍ಒ ಮನೀಶ್, ರಾಜಶೇಖರ್, ಶ್ರೀಕಾಂತ್, ಅಖಿಲ್ ಮೊದಲಾದವರು ಭಾಗವಹಿಸಿದ್ದರು.