ಕಾಸರಗೋಡು: ಪ್ರಾಕೃತಿಕ ವಿಕೋಪದಿಂದ ನಾಲ್ನೂರಕ್ಕೂ ಹೆಚ್ಚುಮಂದಿಯನ್ನು ಬಲಿತೆಗೆದುಕೊಂಡಿರುವ ವಯನಾಡಿನ ಸಂತ್ರಸ್ತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ ಮಾಲಿಕರು ಮತ್ತು ಸಿಬ್ಬಂದಿ ಗುರುವಾರ ಜಿಲ್ಲಾದ್ಯಂತ 'ಕಾರುಣ್ಯ ಯಾತ್ರೆ' ಮೂಲಕ ಹಣ ಸಂಗ್ರಹಿಸಿದರು.
ಸಂಘಟನೆ ರಾಜ್ಯ ಮಿತಿ ತೀರ್ಮಾನದಂತೆ ಕಾಸರಗೋಡು ಜಿಲ್ಲೆಯಲ್ಲೂ ಕಾರುಣ್ಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಶಾಸಕ ಸಿ.ಎಚ್‍ಕುಞಂಬು, ಕಾಸರಗೋಡು ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಐಎಎಸ್, ಕಾಸರಗೋಡು ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್, ಗಿರಿಕೃಷ್ಣನ್, ಶರೀಫ್ ಕೊಡವಂಜಿ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಸಿ.ಎ. ಮಹಮ್ಮದ್‍ಕುಞÂ ಸ್ವಾಗತಿಸಿ, ವಂದಿಸಿದರು.
ಟಿಕೆಟ್ ಇಲ್ಲ, ಬಕೆಟ್ ಸಂಗ್ರಹ:
ವಯನಾಡಿನ ಸಂತ್ರಸ್ತರಿಗಾಗಿ ಖಾಸಗಿ ಬಸ್‍ಗಳು ನಡೆಸಿದ ಕಾರುಣ್ಯ ಯಾತ್ರೆಯಲ್ಲಿ ಪ್ರಯಾಣಿಕರಿಂದ ಸಂಗ್ರಹಿಸಿದ ಹಣಕ್ಕೆ ಟಿಕೆಟ್ ಇರಲಿಲ್ಲ. ಬಕೆಟ್ ಹಿಡಿದು ಸಂತ್ರಸ್ತರಿಗಾಗಿ ಪ್ರಯಾಣಿಕರಿಂದ ಹಣ ಸಂಗ್ರಹಿಸಲಾಯಿತು. ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನೀಡಿ ಪ್ರಯಾಣಿಕರೂ ಸಹಕರಿಸಿದರು.
ಕಾರುಣ್ಯ ಯಾತ್ರೆಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಇಂಧನ ತುಂಬಿಸಲು ಮಾತ್ರ ಹಣ ತೆಗೆಯಲಾಗುವುದು. ಸಿಬ್ಬಂದಿಯೂ ಒಂದು ದಿನದ ತಮ್ಮ ವೇತನವನ್ನು ಸಂತ್ರಸ್ತರಿಗಾಗಿ ಮೀಸಲಿಡಲಿದ್ದಾರೆ. ಖಾಸಗಿ ಬಸ್ ಮಾಲಿಕರ ಸಂಘ ಆಯೋಜಿಸಿರುವ ಈ ಕಾರುಣ್ಯ ಯಾತ್ರೆಯಲ್ಲಿ ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ.ರಾಜ್ಯ ಸಮಿತಿ ವಯನಾಡು ಸಂತ್ರಸ್ತರಿಗಾಗಿ 25ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯಲ್ಲಿ ಜಿಲ್ಲಾ ಸಮಿತಿಯೂ ಕೈಜೋಡಿಸಲಿದೆ ಎಂಬುದಾಗಿ ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ತಿಳಿಸಿದ್ದಾರೆ.