ಮುಳ್ಳೇರಿಯ: ಅಲಂಕೂಡ್ಲು ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಇದೇ ಡಿಸೆಂಬರ್ 29 ರಂದು ನಡೆಯಲಿರುವ ಶಿವಶಕ್ತಿ ಮಹಾಯಾಗದ ಸಮಾಲೋಚನಾ ¸ಭೆÉ ಭಾನುವಾರ ಜರುಗಿತು. ಮಂಗಳೂರು ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಅಧ್ಯಕ್ಷ ಹಾಗು ಖ್ಯಾತ ಉದ್ಯಮಿ ಮಧುಸೂದನ ಅಯರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಗವಂತನೊಂದಿಗೆ ನಾವು ನಿತ್ಯ ಸಂಪರ್ಕವನ್ನು ಸಾಧಿಸುವಷ್ಟು ಧ್ಯಾನ ಮಾಡಬೇಕು.ಭÀಕ್ತಿಯಿಂದ ದೇವರನ್ನು ನೆನೆದಾಗ ನಮ್ಮೊಳಗೆ ಆತ್ಮ ಪ್ರತ್ಯಕ್ಷನಾಗುತ್ತಾನೆ. ದೇವರ ಕಾರ್ಯದಲ್ಲಿ ಯಾರೂ ಹಿಂದೆ ನಿಲ್ಲಬಾರದು. ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರ ಅಭಿವೃದ್ಧಿಯೆಂಬ ಲಕ್ಷ್ಯದೊಂದಿಗೆ ಮುನ್ನಡೆಯಬೇಕು ಎಂದರು.
ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸೀತಾರಾಮರಾವ್ ಪಿಲಿಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪೈಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಟ್ರಸ್ಟಿ ಕೃಷ್ಣನ್ ಚಾತಪ್ಪಾಡಿ, ಅರ್ಲಡ್ಕ ಶ್ರೀ ವಿಷ್ಣುಮೂರ್ತಿ ಸೇವಾಸಮಿತಿ ಅಧ್ಯಕ್ಷ ನಾರಾಯಣ ಪಿಲಿಕೂಡ್ಲು, ಪುಂಡೂರು ಗಣೇಶ ಮಂದಿರದ ಟ್ರಸ್ಟ್ ಅಧ್ಯಕ್ಷ ದೇವಾನಂದ ಮಾಳಂಗಾಯಿ, ಪೈಕ ಶಾಲಾ ಪ್ರಬಂಧಕ ನಿತ್ಯಾನಂದ ನೆಲ್ಲಿತ್ತಳ, ನಿವೃತ್ತ ಅಧ್ಯಾಪಕ ಕುಂಞಂಬು, ಜಯನ್ ಕೋಟೂರು, ಮಾಧವನ್ ಆಚಾರಿ, ಕೃಷ್ಣರಾಜ ಪುಣಿಂಚಿತ್ತಾಯ, ರವಿಶಂಕರ ಪುಣಿಂಚಿತ್ತಾಯ, ಗೋಪಾಲ ಆಚಾರಿ, ರಾಮಚಂದ್ರ ವೋರ್ಕೂಡ್ಲು, ಕುಶಲನ್ ಮೊದಲಾದವರು ಮಾತನಾಡಿದರು. ಶ್ರೀಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನೀಲ್ ಸ್ವಾಗತಿಸಿ ಯಾಗದ ಉದ್ದೇಶವನ್ನು ವಿವರಿಸಿದರು. ಜೀರ್ಣೋದ್ಧಾರ ಸಮಿತಿಯ ಸದಸ್ಯ ರತ್ನಾಕರ ಆಳ್ವ ಪುಂಡೂರು ವಂದಿಸಿದರು.