ಸಮರಸ ಚಿತ್ರಸುದ್ದಿ: ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸೆಮಿನಾರ್ ಸ್ಪರ್ಧೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಹತ್ತನೆ ತರಗತಿಯ ರಕ್ಷಾ ದ್ವಿತೀಯ ಸ್ಥಾನಗಳಿಸಿದ್ದಾಳೆ. ಪೆರ್ಣೆ ನಿವಾಸಿ ಬಾಲಕೃಷ್ಣ-ಸಾವಿತ್ರಿ ದಂಪತಿಯ ಪುತ್ರಿಯಾದ ರಕ್ಷಾ ಅವಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.