ನವದೆಹಲಿ: ಮೈಕ್ರೊಪ್ಲಾಸ್ಟಿಕ್‌ನಿಂದ ಆಹಾರ ಉತ್ಪನ್ನಗಳು ಕಲಬೆರಕೆಯಾಗುತ್ತಿರುವುದರ ಮೌಲ್ಯಮಾಪನ ಹಾಗೂ ಕಲಬೆರಕೆ ಪ್ರಮಾಣ ಪತ್ತೆ ಹಚ್ಚುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಚಾಲನೆ ನೀಡಿದೆ.
ನವದೆಹಲಿ: ಮೈಕ್ರೊಪ್ಲಾಸ್ಟಿಕ್‌ನಿಂದ ಆಹಾರ ಉತ್ಪನ್ನಗಳು ಕಲಬೆರಕೆಯಾಗುತ್ತಿರುವುದರ ಮೌಲ್ಯಮಾಪನ ಹಾಗೂ ಕಲಬೆರಕೆ ಪ್ರಮಾಣ ಪತ್ತೆ ಹಚ್ಚುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಚಾಲನೆ ನೀಡಿದೆ.
ಆಹಾರ ಉತ್ಪನ್ನಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳನ್ನು ಬೆರೆಸಲಾಗುತ್ತಿರುವುದು ಹೊಸ ಅಪಾಯವನ್ನು ಒಡ್ಡಿದೆ ಹಾಗೂ ಈ ವಿದ್ಯಮಾನದ ಬಗ್ಗೆ ತುರ್ತು ಗಮನ ಹರಿಸುವುದು ಅಗತ್ಯ ಎಂಬ ಆತಂಕ ವ್ಯಕ್ತವಾದ ಕಾರಣ ಮಾರ್ಚ್‌ನಲ್ಲಿ ಎಫ್‌ಎಸ್‌ಎಸ್‌ಎಐ ಈ ಕಾರ್ಯಕ್ಕೆ ಚಾಲನೆ ನೀಡಿದೆ.
ಉದ್ದೇಶಗಳು
ವಿವಿಧ ಆಹಾರ ಉತ್ಪನ್ನಗಳಲ್ಲಿ ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳನ್ನು ಪತ್ತೆ ಹಚ್ಚುವ ವಿಧಾನಗಳ ಅಭಿವೃದ್ಧಿ ಹಾಗೂ ದೃಢೀಕರಣ
ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳ ಪ್ರಮಾಣ ಪತ್ತೆ
ಇವುಗಳ ವಿಶ್ಲೇಷಣೆಗೆ ಸಂಬಂಧಿಸಿ ವಿವಿಧ ಪ್ರಯೋಗಾಲಯಗಳ ವರದಿ ಗಳ ಹೋಲಿಕೆ ಹಾಗೂ ನಿರ್ಣಾಯಕ ದತ್ತಾಂಶ ಸಿದ್ಧಪಡಿಸುವ ಕುರಿತ ಶಿಷ್ಟಾ ಚಾರಗಳನ್ನು ಅಭಿವೃದ್ಧಿಪಡಿಸುವುದು
ಕಾರಣಗಳು
ದೇಶದಲ್ಲಿ ಸಕ್ಕರೆ ಮತ್ತು ಉಪ್ಪು ಸೇರಿದಂತೆ ಸಾಮಾನ್ಯ ಆಹಾರ ಉತ್ಪನ್ನಗಳಲ್ಲಿ ಮೈಕ್ರೊ ಪ್ಲಾಸ್ಟಿಕ್‌ಗಳಿರುವ ಕುರಿತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಇತ್ತೀಚೆಗೆ ತನ್ನ ವರದಿಯಲ್ಲಿ ಹೇಳಿತ್ತು
ಭಾರತದಲ್ಲಿ ಬಳಕೆಯಲ್ಲಿರುವ ಆಹಾರ ಉತ್ಪನ್ನಗಳಲ್ಲಿ ಕಂಡುಬರುವ ಮೈಕ್ರೊಪ್ಲಾಸ್ಟಿಕ್‌ಗಳಿಂದಾಗಿ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಅರಿಯಬೇಕು ಎಂದು ಎಫ್‌ಎಒ ತನ್ನ ವರದಿಯಲ್ಲಿ ಹೇಳಿತ್ತು.
ಅಧ್ಯಯನ
ಆಹಾರ ಉತ್ಪನ್ನಗಳ ಇಂತಹ ಕಲಬೆರಕೆ ಕುರಿತು ಅಧ್ಯಯನಕ್ಕಾಗಿ ಎಫ್‌ಎಸ್
ಎಸ್‌ಎಐ, ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳೊಂದಿಗೆ ಅಧ್ಯಯನ ಕೈಗೊಂಡಿದೆ
ಸಿಎಸ್‌ಐಆರ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಜ್ (ಲಖನೌ), ಐಸಿಎಆರ್-ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಕೊಚ್ಚಿ) ಹಾಗೂ ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಪಿಲನಿ) ಸಹಯೋಗ