HEALTH TIPS

ಆಯಪಲ್ ಉತ್ಪನ್ನಗಳ ಮೇಲೆ ಸೈಬರ್ ದಾಳಿ ಅಪಾಯ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

  ಐಫೋನ್, ಐಪ್ಯಾಡ್ ಮತ್ತಿತರ ಆಯಪಲ್ ಉತ್ಪನ್ನಳ ಮೇಲೆ ಹಲವು ಸೈಬರ್ ದಾಳಿಗಳು ನಡೆಯುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಸಾಧನಗಳಿಂದ ಸೂಕ್ಷ್ಮ ಮತ್ತು ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (ಸಿಇಆರ್‍ಟಿ-ಇನ್) ಈ ಬಗ್ಗೆ ಅಧಿಕೃತ ಪ್ಲಾಟ್‍ಫಾರಂನಲ್ಲಿ ಎಚ್ಚರಿಕೆ ನೀಡಿ, ತೀವ್ರಸ್ವರೂಪದ ದಾಳಿಯ ಸಾಧ್ಯತೆ ಇದೆ ಎಂದು ಹೇಳಿದೆ.

ಆಗಸ್ಟ್ 2ರಂದು ನೀಡಿರುವ ಹೇಳಿಕೆಯಲ್ಲಿ, "ಆಯಪಲ್ ಉತ್ಪನ್ನಗಳು ಹಲವು ಸೈಬರ್ ದಾಳಿಗಳಿಗೆ ತುತ್ತಾಗುವ ಅಪಾಯವಿದೆ. ಈ ಮೂಲಕ ದಾಳಿಕೋರರು ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಅಪಾಯವಿದ್ದು, ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಿ ಈ ದಾಳಿ ನಡೆಸುವ ಕಾರಣದಿಂದ ಸೇವೆಯ ನಿರಾಕರಣೆ ಸಾಧ್ಯತೆ ಇದೆ. ನಿಗದಿತ ವ್ಯವಸ್ಥೆಗಳ ಮೇಲೆ ಗುರಿ ಮಾಡಿ ಈ ದಾಳಿ ನಡೆಯಲಿದೆ ಎಂದು ಎಚ್ಚರಿಸಿದೆ.

ಆಯಪಲ್ ಸಾಫ್ಟ್ ವೇರ್ ಗಳಾದ ಐಒಎಸ್ ಮತ್ತು ಐಪ್ಯಾಡ್‍ಓಎಸ್‍ನ 17.6 ಮತ್ತು 17.7.9ಕ್ಕಿಂತ ಹಿಂದಿನ ಅವತರಣಿಕೆಗಳ ಮೇಲೆ ನಡೆಯುವ ಸಾಧ್ಯತೆಯನ್ನು ಅಂದಾಜಿಸಿದೆ. ಜತೆಗೆ ಮ್ಯಾಕ್ ಒಎಸ್ ಸೊನೋಮಾದಿಂದ 13.6.8ಕ್ಕಿಂತ ಪೂರ್ವದ 14.6 ಮ್ಯಾಕ್‍ಒಎಸ್ ವೆಂಚುರಾ ವರ್ಷನ್‍ಗಳ ವರೆಗೆ, 12.7.6ಕ್ಕಿಂತ ಹಿಂದಿನ ಮ್ಯಾಕ್ ಒಎಸ್ ಮಾನಿಟರಿ ವರ್ಷನ್‍ಗಳ ಮೇಲೆ ದಾಳಿ ನಡೆಯಲಿದೆ ಎಂದು ಅಂದಾಜಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries