ನವದೆಹಲಿ: ಆನೆಕಾಲು ರೋಗವನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು ಉಚಿತವಾಗಿ ಔಷಧ ವಿತರಿಸುವ ಅರ್ಥವಾರ್ಷಿಕ ಕಾರ್ಯಕ್ರಮದ ಎರಡನೆಯ ಹಂತಕ್ಕೆ ಶನಿವಾರ ಚಾಲನೆ ನೀಡಿದೆ.
ನವದೆಹಲಿ: ಆನೆಕಾಲು ರೋಗವನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯವು ಉಚಿತವಾಗಿ ಔಷಧ ವಿತರಿಸುವ ಅರ್ಥವಾರ್ಷಿಕ ಕಾರ್ಯಕ್ರಮದ ಎರಡನೆಯ ಹಂತಕ್ಕೆ ಶನಿವಾರ ಚಾಲನೆ ನೀಡಿದೆ.
ರಾಜ್ಯದ ಬೀದರ್ ಸೇರಿದಂತೆ ಈ ರೋಗವು ಜನರನ್ನು ಹೆಚ್ಚಾಗಿ ಬಾಧಿಸುತ್ತಿರುವ 63 ಜಿಲ್ಲೆಗಳಲ್ಲಿ ಔಷಧ ವಿತರಣೆ ಮಾಡಲಾಗುತ್ತದೆ.
'ಔಷಧ ವಿತರಣೆ ಕಾರ್ಯಕ್ರಮವು ಯಶಸ್ಸು ಕಾಣಬೇಕು ಎಂದಾದರೆ, ಔಷಧ ಪಡೆಯಲು ಅರ್ಹವಾಗಿರುವವರ ಪೈಕಿ ಶೇ 90ರಷ್ಟು ಮಂದಿ ಅದನ್ನು ಪಡೆದು, ಸೇವಿಸಬೇಕು' ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಹೇಳಿದ್ದಾರೆ.
2027ಕ್ಕೆ ಮೊದಲು ಆನೆಕಾಲು ರೋಗವನ್ನು ನಿರ್ಮೂಲಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಪಡೆದ ಔಷಧವನ್ನು ಜನ ಸೇವಿಸದೆ ಇರುವುದು ಈ ಗುರಿ ತಲುಪುವಲ್ಲಿ ದೊಡ್ಡ ಅಡ್ಡಿಯಾಗಿದೆ.