ತ್ರಿಶೂರ್: ಇರಿಂಞಲಕುಡ ಮುನ್ಸಿಪಲ್ ಕಾರ್ಪೋರೇಶನ್‍ನ ಸ್ವಚ್ಛತಾ ಮಿಷನ್ ರಾಯಭಾರಿ ಸ್ಥಾನಕ್ಕೆ ನಟ ಇಡವೇಳ ಬಾಬು ರಾಜೀನಾಮೆ ನೀಡಿದ್ದಾರೆ.
ಕಿರುಕುಳ ಪ್ರಕರಣ ದಾಖಲಾದ ಬೆನ್ನಲ್ಲೇ ಬಾಬು ಅವರನ್ನು ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ ಹಾಗೂ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿತ್ತು. ಕಳೆದೊಂದು ವಾರದಿಂದ ತಮ್ಮ ವಿರುದ್ಧ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಇರಿಂಞಲಕುಡ ನಗರಸಭೆಯ 'ಸ್ವಚ್ಛತಾ ರಾಯಭಾರಿ' ಹುದ್ದೆಯಿಂದ ಹಿಂದೆ ಸರಿಯುತ್ತಿರುವುದಾಗಿ ಇಡವೇಳ ಬಾಬು ಘೋಷಿಸಿದ್ದಾರೆ.
ಪ್ರಕರಣ ಕಾನೂನಾತ್ಮಕವಾಗಿ ನಡೆಯಬೇಕಾಗಿರುವುದರಿಂದ ತನ್ನನ್ನು ಅಧಿಕೃತ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಕಾರಣಕ್ಕೆ ಇರಿಂಞಲಕುಡ ನಗರಸಭೆಯು ತನ್ನ ಹೆಸರಿನಲ್ಲಿ ನಡೆದಿರುವ ಅಪರಾಧಗಳಿಂದ ಯಾವುದೇ ರೀತಿಯ ಕಳಂಕಿತವಾಗಬಾರದು ಎಂದು ಪ್ರಾಮಾಣಿಕವಾಗಿ ಅವರು ತಿಳಿಸಿದ್ದಾರೆ.