ಮಂಜೇಶ್ವರ : ಹೈಟೆನ್ಶನ್ ವಿದ್ಯುಣಜಿ ಲೈನಿನಿಂದ ಶಾಕ್ ತಗುಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಸನಿಹದ ಹೊಸಬೆಟ್ಟು ನಿವಾಸಿ ಯಶವಂತ(23)ಮೃತಪಟ್ಟಿದ್ದಾರೆ. ಉಪ್ಪಳದಲ್ಲಿ ಪೆಟ್ರೋಲ್ ಪಂಪ್‍ನಲ್ಲಿ ಕಾರ್ಮಿಕರಾಗಿದ್ದರು. ಕೆಲಸಕ್ಕೆ ಹೊರಡುವ ಮಧ್ಯೆ ಮನೆ ಛಾವಣಿಗೆ ಬಾಗಿ ನಿಂತಿದ್ದ ತೆಂಗಿನ ಗರಿಯನ್ನು ತೆರವುಗೊಳಿಸುವ ಯತ್ನದಲ್ಲಿದ್ದಾಗ ವಿದ್ಯು ಶಾಕ್ ತಗುಲಿ ಅಂಗಳಕ್ಕೆ ಅಳವಡಿಸಿದ್ದ ಶೀಟ್‍ಗೆ ಬಿದ್ದಿದ್ದರು. ತಕ್ಷಣ ಇವರನ್ನು ಮಂಜೇಶ್ವರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.