ಮಂಜೇಶ್ವರ: ಮೀಂಜ ಬಿಲ್ಲವ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಹಿರಿಯರಾದ ಚೆನ್ನಪ್ಪ ಪೂಜಾರಿ ಚಿಗುರುಪಾದೆ, ಸುಣ್ಣಾರ ಬೀಡು ಕ್ಷೇತ್ರದ ಆರ್ಚಕ ರಾಮಚಂದ್ರ ಪೂಜಾರಿ, ಚಂದ್ರಹಾಸ ಪೂಜಾರಿ ಕಡಂಬಾರು, ಪದಾಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ವಾರ್ಷಿಕ ಕಾರ್ಯಕ್ರಮಗಳಾದ ಶ್ರೀ ಲಕ್ಸ್ಮಿ ಸಹಿತ ಸತ್ಯನಾರಾಯಣ ಪೂಜೆ, ಆಟೋಟ ಸ್ಪರ್ಧೆಗಳನ್ನು ಮಾಡುವ ಬಗ್ಗೆ ತೀರ್ಮಾನಿಸಲಾಯಿತು.