ಪೆರ್ಲ: ನಂಬಿಕೆಯ ತಳಹದಿಯಲ್ಲಿ ರೂಢಿಗೊಂಡ ತುಳುವರ ಆಚರಣೆ ಆರಾಧನೆಗಳು ಅವೈಜ್ಞಾನಿಕವಾದ ತಪ್ಪು ಕಲ್ಪನೆಗಳಲ್ಲ. ಬದಲಿಗೆ ನಮ್ಮ ಜನಜೀವನಕ್ಕೆ ಅನ್ಯೋನ್ಯವಾದ ಬದುಕಿಗೆ ಪ್ರೇರಪಣೆಯಾಗಬಲ್ಲ ರೂಢಿಗತ ಸತ್ಯ ಕಲ್ಪನೆಗಳು ಎಂದು ಹಿರಿಯ ಲೇಖಕ, ಸಂಶೋಧಕ, ಕಾಸರಗೋಡು ಸರ್ಕಾರಿ ಕಾಲೇಜು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಅಭಿಪ್ರಾಯಪಟ್ಟರು.
ಅವರು ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಸಹಯೋಗದಲ್ಲಿ ಬೆದ್ರಂಪಳ್ಳದ "ಪರಿಶ್ರಮ ಗಾರ್ಡನ್ಸ್" ನಲ್ಲಿ ಆಯೋಜಿಸಿದ "ಆಟಿ ಕೂಟ ಮತ್ತು ಆಷಾಢ- ಕವಿ ಸಮಯ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಬಿ.ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಹಾಗೂ ಮಂಚಿ ಕೊಲ್ನಾಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಆಟಿ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕೇರಳ ಎಸ್ಸಸ್ಸೆಲ್ಸಿ ಕನ್ನಡ ಮಕ್ಕಳ ಶೈಕ್ಷಣಿಕ ಮಾರ್ಗದರ್ಶಿಯಾಗಿ "ಟೀಮ್ ಕನ್ನಡ" ಪ್ರಸ್ತುತಪಡಿಸಿದ ಯೂಟ್ಯೂಬ್ ಚಾನೆಲ್ ನ್ನು ಲೇಖಕ, ಸಂಶೋಧಕ, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಬಿಡುಗಡೆಗೊಳಿಸಿದರು. ಬಳಿಕ ಪುಸ್ತಕ ಪ್ರದರ್ಶನ, ಆಷಾಢದ ಭಕ್ಷ್ಯಭೋಜ್ಯಗಳು, ಕವಿಗೋಷ್ಠಿ ಜರಗಿತು.
ಕವಿ, ವಿಮರ್ಶಕ, ಮೂಡಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿದ್ದರು.ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭಾಶಂಸನೆಗೈದರು.ವ್ಯಾಪಾರಿ ಮುಂದಾಳು ಟಿ.ಪ್ರಸಾದ್ ಪೆರ್ಲ, ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಸಂಚಾಲಕ ಸುಭಾμï ಪೆರ್ಲ ಉಪಸ್ಥಿತರಿದ್ದರು. ಸಾಂಗತ್ಯ ಪ್ರಾರ್ಥನೆಗೈದರು. ಸಮತಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ ಸುಂದರ ಬಾರಡ್ಕ ವಂದಿಸಿದರು. ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು.