HEALTH TIPS

ಮಧುಮೇಹ ಸಮಸ್ಯೆ ಕಾಡದಿರಲು ಈ ಆಹಾರ ಮಾರ್ಗಸೂಚಿಗಳನ್ನು ಫಾಲೋ ಮಾಡಿ

 ಜಾಗತಿಕವಾಗಿ ಕೋಟ್ಯಾಂತರ ಜನರನ್ನು ಬಾಧಿಸುವ ಗಂಭೀರ ಆದ್ರೆ ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ (ಎನ್‌ಸಿಡಿ) ಮಧುಮೇಹ (Diabetes) ಪ್ರಮುಖವಾಗಿದೆ. ಒಂದು ಅಧ್ಯಯನವು, 101 ಮಿಲಿಯನ್ ಭಾರತೀಯರು ಮಧುಮೇಹಿಗಳು ಮತ್ತು 136 ಮಿಲಿಯನ್ ಜನರು ಪ್ರಿಡಿಯಾಬಿಟಿಕ್‌ ಗಳಿಂದ ಬಳಲುತ್ತಿದ್ದಾರೆ ಎಂದಿದೆ.

ಈ ಸ್ಥಿತಿ ಕೇವಲ ವಯಸ್ಸಾದವರಿಗೆ ಮಾತ್ರ ಅನ್ಕೋಬೇಡಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಕಂಡು ಬರುತ್ತಿದೆ.

ಮಧುಮೇಹವನ್ನು ತಡೆಯಬಹುದೇ?

ಖಂಡಿತ ಮಧುಮೇಹವನ್ನು ಕಂಟ್ರೋಲ್‌ ಮಾಡಲು ಸಾಧ್ಯವಿದೆ. ಆದ್ರೆ ಇದಕ್ಕೆ ನಮ್ಮ ಸಮರ್ಪಣೆ ಬೇಕು. ಮುಖ್ಯವಾಗಿ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ತಂಬಾಕು ಸೇವನೆಯನ್ನು ತಪ್ಪಿಸುವುದು ಸೇರಿ ಈ ಮೂರು ಮುಖ್ಯ ಹಂತಗಳು ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.

WHO ಕೂಡ ಮಧುಮೇಹವನ್ನು 80% ರಷ್ಟು ತಡೆಗಟ್ಟಬಹುದು ಎಂದು ಹೇಳುತ್ತದೆ.

ಮಧುಮೇಹ ಮುಕ್ತ ಜೀವನವನ್ನು ನಡೆಸಲು ನಿಮಗೆ ಸಹಾಯ ಮಾಡುವ ಕೆಲವು ಆಹಾರ ಮಾರ್ಗಸೂಚಿಗಳು ಇಲ್ಲಿವೆ:

ಪ್ರತಿದಿನ ಒಂದು ಸಮತೋಲಿತ ಊಟವನ್ನು ಸೇವಿಸಿ: ಆಹಾರದ ವೈವಿಧ್ಯತೆಯನ್ನು ಸುಧಾರಿಸಲು ಮತ್ತು ಎಲ್ಲಾ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ಆಹಾರ ಗುಂಪುಗಳಿಂದ ಉದಾಹರಣೆಗೆ ಧಾನ್ಯ, ರಾಗಿಗಳು, ಬೇಳೆ, ದ್ವಿದಳ ಧಾನ್ಯ, ಮೊಟ್ಟೆ, ಮೀನು, ಡೈರಿ, ತರಕಾರಿಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಬ್ಯಾಲೆನ್ಸ್ಡ್‌ ಆಗಿ ತೆಗೆದುಕೊಳ್ಳಿ.

ಊಟದ ಗಾತ್ರ: ಮಿತಿಮೀರಿದ ಕ್ಯಾಲೋರಿ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಅತಿಯಾಗಿ ತಿನ್ನುವುದನ್ನು ತಪ್ಪಿಸಿ.

ಫೈಬರ್ ಸೇವನೆಯನ್ನು ಹೆಚ್ಚಿಸಿ: ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು ಮತ್ತು ಬೀಜಗಳಂತಹ ಆಹಾರವು ಫೈಬರ್ನಲ್ಲಿ ಸಮೃದ್ಧವಾಗಿದೆ, ಇದು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಆದ್ದರಿಂದ, ನಿಮ್ಮ ಊಟದಲ್ಲಿ ಈ ಆಹಾರಗಳನ್ನು ಸೇರಿಸಿ.

ಹೈಡ್ರೇಟೆಡ್ ಆಗಿರಿ: ನಿರ್ಜಲೀಕರಣವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಹೆಚ್ಚೆಚ್ಚು ನೀರು ಕುಡಿಯಿರಿ.

ಸಾಫ್ಟ್‌ ಡ್ರಿಂಕ್ಸ್‌, ಸಕ್ಕರೆ ಭರಿತ ಪಾನೀಯಗಳನ್ನು ಕುಡಿಯುವ ಬದಲು ಎಳನೀರು, ನಿಂಬು ಪಾನಿ, ಸೂಪ್ ಅಥವಾ ಗ್ರೀನ್ ಟೀಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಕ್ಕರೆಯ ಕಡುಬಯಕೆಯನ್ನು ಕಡಿಮೆ ಮಾಡುತ್ತದೆ.

ನಿಯಮಿತ ವ್ಯಾಯಾಮ: ಪ್ರತಿದಿನ ಕನಿಷ್ಠ 60 ನಿಮಿಷಗಳ ಕಾಲವಾದ್ರೂ ವ್ಯಾಯಾಮ ಮಾಡಿ. ಇದು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಒತ್ತಡವನ್ನು ನಿರ್ವಹಿಸಿ: ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆಯಿರಿ ಮತ್ತು ಒತ್ತಡದಿಂದ ದೂರವಿರಲು ಯೋಗ, ಓದು ಅಥವಾ ಸಂಗೀತವನ್ನು ಆಲಿಸಿ.
ಈ ಅಭ್ಯಾಸಗಳನ್ನು ತಪ್ಪಿಸಿ

ಊಟವನ್ನು ಬಿಡುವುದನ್ನು ತಪ್ಪಿಸಿ: ನಿಮ್ಮ ಊಟವನ್ನು ನಿಯಮಿತ ಸಮಯದಲ್ಲಿ ತಿನ್ನಲು ಪ್ರಯತ್ನಿಸಿ. ಊಟವನ್ನು ಬಿಟ್ಟುಬಿಡುವುದು ಅಥವಾ ಊಟದ ನಡುವೆ ದೀರ್ಘವಾದ ಅಂತರವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. ಹೀಗಾಗಿ ಈ ಅಭ್ಯಾಸವನ್ನು ತಪ್ಪಿಸಿ.

ಸಕ್ಕರೆ ಆಹಾರಗಳು ಮತ್ತು ಪಾನೀಯಗಳನ್ನು ಮಿತಿಗೊಳಿಸಿ: ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳಾದ ಸೋಡಾ, ಎನರ್ಜಿ ಡ್ರಿಂಕ್ಸ್, ಮಿಠಾಯಿಗಳು ಮತ್ತು ಸಿಹಿತಿಂಡಿಗಳ ಬಳಕೆಯನ್ನು ಕಡಿಮೆ ಮಾಡಿ.

ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ: ಅನಾರೋಗ್ಯಕರ ಕೊಬ್ಬುಗಳು, ಸಕ್ಕರೆ ಮತ್ತು ಉಪ್ಪನ್ನು ಹೆಚ್ಚಾಗಿರುವ ಕಾರಣ ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.

ಮಾದಕ ವ್ಯಸನದಿಂದ ದೂರವಿರಿ: ಧೂಮಪಾನ, ಮದ್ಯಪಾನ ಮತ್ತು ಅಕ್ರಮ ವಸ್ತುಗಳ ಬಳಕೆಯ ಆರೋಗ್ಯದ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಅವುಗಳನ್ನು ಪ್ರಯತ್ನಿಸಬೇಡಿ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries