ನವದೆಹಲಿ: ಎನ್‌ಜಿಒಗಳ ನೋಂದಣಿ ನವೀಕರಣ ಮಾಡುವುದಾಗಿ ಹೇಳಿ, ತನ್ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ವಿಭಾಗದ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

ನಕಲಿ ಲಾಂಛನ, ಅಧಿಕಾರಿಗಳ ನಕಲಿ ಇ-ಮೇಲ್ ಐಡಿ ಬಳಸಿ, ಎಫ್‌ಸಿಆರ್‌ಎ ವಿಭಾಗದ ಅಧಿಕಾರಿಗಳ ಹೆಸರಿನಲ್ಲಿ ಖೊಟ್ಟಿ ಇ-ಮೇಲ್ ಸಂದೇಶಗಳನ್ನು ಕಳುಹಿಸಿ, ಹಣ ಕೇಳಲಾಗುತ್ತಿದೆ.
ನೋಂದಣಿ, ನವೀಕರಣ, ಈಗಾಗಲೇ ನೀಡಿರುವ ಮಾಹಿತಿಯಲ್ಲಿ ಬದಲಾವಣೆಗೆ ಮತ್ತು ಪೂರ್ವಾನುಮತಿ ಸೇರಿದಂತೆ ಯಾವುದೇ ಸೇವೆಗಾಗಿ ಅಧಿಕೃತ ಪೋರ್ಟಲ್ https://www.fcraonline.nic.in/ ಸಂಪರ್ಕಿಸುವಂತೆ ಕೋರಿದೆ.