HEALTH TIPS

ದುಬಾರಿ ಮೊಬೈಲ್ ಬುಕ್ ಮಾಡಿದವನಿಗೆ ಅರ್ಧ ಡಜನ್ ಟೀ ಲೋಟ ಕಳುಹಿಸಿದ ಅಮೆಜಾನ್!

 ಡಜನ್‌ ಟೀ ಲೋಟಗಳನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿ ಮುಂಬೈನ ವ್ಯಕ್ತಿಯೊಬ್ಬರು ಇ-ಕಾಮರ್ಸ್‌ ವಲಯದ ದೈತ್ಯ ಕಂಪನಿ 'ಅಮೆಜಾನ್‌' ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೃಹತ್‌ ಮುಂಬೈ ವಿದ್ಯುತ್‌ ಸರಬರಾಜು ನಿಗಮದಲ್ಲಿ ಎಂಜಿನಿಯರ್‌ ಆಗಿರುವ ಅಮರ್‌ ಚೌಹಾಣ್‌ ಅವರೇ ದೂರು ನೀಡಿರುವ ವ್ಯಕ್ತಿ.

         ₹54,999 ಬೆಲೆಯ ಟೆಕ್ನೊ ಫ್ಯಾಂಥಮ್‌ ವಿ ಫೋಲ್ಡ್‌ ಮೊಬೈಲ್‌ ಅನ್ನು ಜುಲೈ 13ರಂದು ಆರ್ಡರ್‌ ಮಾಡಿದ್ದೆ. ಎರಡು ದಿನಗಳ ನಂತರ ಪಾರ್ಸೆಲ್‌ ಬಂತು. ತೆರೆದು ನೋಡಿದಾಗ 6 ಟೀ ಲೋಟಗಳಿರುವುದನ್ನು ಕಂಡು ಆಘಾತವಾಯಿತು ಎಂದು ಆರೋಪಿಸಿದ್ದಾರೆ.

            ಈ ವಿಚಾರವಾಗಿ ಅಮೆಜಾನ್‌ ಅವರನ್ನೂ ಸಂಪರ್ಕಿಸಿದೆ. ಆದರೆ, ಅವರಿಂದ ಸಮಾಧಾನಕರ ಉತ್ತರವೇನೂ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

              ಈ ಸಂಬಂಧ ವಂಚನೆ ಆರೋಪದಲ್ಲಿ ಅಮೆಜಾನ್‌ ವಿರುದ್ಧ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮಹಿಮ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆಜಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries