ಪೆರ್ಲ: ಎಣ್ಮಕಜೆ ಪಂಚಯಿತಿಯ ಖಂಡಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆ. 26ರಂದು ಖಂಡಿಗೆ ಸೇವಾ ಕೇಂದ್ರ ವಠಾರದಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ಹಿರಿಯ ನೇತ್ರ ತಜ್ಞ ಡಾ. ರಾಘವೇಂದ್ರ ಭಟ್ ದೀಪೋಜ್ವಲನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ವಿವಿಧ ಸ್ಪರ್ಧೆ ನಡೆಯುವುದು.
ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪುಟ್ಟಪ್ಪ ಖಮಡಿಗೆ ಅಧ್ಯಕ್ಷತೆ ವಹಿಸುವರು. ಹೊಂಬೆಳಕು ಟ್ಯೂಶನ್ ಸೆಂಟರ್ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಧಾರ್ಮಿಕ ಮುಂದಾಳು ಸದಾಶಿವ ಭಟ್ ಹರಿನಿಲಯ, ಸಮಿತಿ ಕೋಶಾಧಿಕಾರಿ ಸುಬ್ರಾಯ ನಾಯಕ್ ಖಂಡಿಗೆಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಹಿರಿಯ ದೈವ ನರ್ತನಕಲಾವಿದ ಚೋಮ ಖಂಡಿಗೆ ಅವರನ್ನು ಸನ್ಮಾನಿಸಲಾಗುವುದು. ಕೇಂದ್ರೀಯ ವಿಶ್ವ ವಿದ್ಯಾಲಯದ ಮಾಸ್ಟರ್ ಆಫ್ ಎಜುಕೇಶನ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಗಣೇಶ್ ಕುಮಾರ್ ಖಂಡಿಗೆ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು.