ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಕೇಂದ್ರ ಹವಾಮಾನ ಇಲಾಖೆಯ ನಿರ್ದೇಶ ಹಿನ್ನೆಲೆಯಲ್ಲಿ ಚೆರ್ಕಳ-ಚಟ್ಟಂಚಾಲ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದಿನ ಸೂಚನೆ ವರೆಗೆ ಬಸ್ಸುಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಆದೇಶ ಹೊರಡಿಸಿದ್ದಾರೆ.