ಮಂಜೇಶ್ವರ : ವರ್ಕಾಡಿ ಪಂಚಾಯತಿ ವ್ಯಾಪ್ತಿಯ ಕೊಡ್ಲಮೊಗರು- ಪಾತೂರು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಶಟರ್ ಮುರಿದು ಕಳ್ಳರು ಒಳನುಗ್ಗಿದ ಘಟನೆ ನಡೆದಿದೆ. ಕಳ್ಳರು ಸ್ಟ್ರಾಂಗ್ ರೂಂ ನ್ನು ಮುರಿಯುವ ಯತ್ನ ನಡೆಸಿದರೂ ಸಫಲತೆಯನ್ನು ಕಾಣದ ಹಿನ್ನೆಲೆಯಲ್ಲಿ ಯಾವುದೇ ಆಭರಣವನ್ನಾಗಲೀ ಇತರ ಸಾಮಾಗ್ರಿಗಳನ್ನಾಗಲೀ ಎಗರಿಸಲು ಸಾಧ್ಯವಾಗಿಲ್ಲ.
ಭಾನುವಾರ ಮಧ್ಯಾಹ್ನದ ಹೊತ್ತಿಗೆ ವಿಷಯ ಬೆಳಕಿಗೆ ಬಂದಿದೆ. ಎರಡು ಅಂತಸ್ಥಿನ ಕಟ್ಟಡದ ಮೇಲಿನ ಅಂತಸ್ಥಿನಲ್ಲಿ ಬ್ಯಾಂಕ್ ಕಾರ್ಯಾಚರಿಸುತ್ತದೆ.
ಒಂದನೇ ಮಹಡಿಗೆ ತಲಪಿದ ಕಳ್ಳರು ಬ್ಯಾಂಕಿನ ಶಟರ್ ಮುರಿದು ಒಳನುಗ್ಗಿದ್ದಾರೆ. ಕಬ್ಬಿಣದ ಸರಳನ್ನು ಉಪಯೋಗಿಸಿ ಶಟರನ್ನು ಬೇರ್ಪಡಿಸಿ ಒಳನುಗ್ಗಿದ ಕಳ್ಳರು ಸ್ಟ್ರಾಂಗ್ ರೂಂ ನ್ನು ಮುರಿಯಲು ನಡೆಸಿದರೂ ವಿಫಲಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಹಾಗೂ ನಗದು ಸುರಕ್ಷಿತವಾಗಿರುವುದಾಗಿ ಬ್ಯಾಂಕ್ ಕಾರ್ಯದರ್ಶಿ ಜಯರಾಂ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾಹಿತಿ ಅರಿತು ಸ್ಥಳಕ್ಕೆ ಪೋಲೀಸರ ತಂಡ ಆಗಮಿಸಿ ತಪಾಸಣೆ ನಡೆಸಿದರು.