ಜೈಪುರ: ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆಯಾಗಿದ್ದ ಸಂದರ್ಭದಲ್ಲೂ ನ್ಯಾಯದ ತತ್ವಗಳನ್ನು ರಕ್ಷಿಸಿದ್ದ ನ್ಯಾಯಾಲಯಗಳಲ್ಲಿ ರಾಜಸ್ಥಾನ ಹೈಕೋರ್ಟ್ ಸಹ ಒಂದು ಎಂದು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಭಾನುವಾರ ಹೇಳಿದ್ದಾರೆ.
ಜೈಪುರ: ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆಯಾಗಿದ್ದ ಸಂದರ್ಭದಲ್ಲೂ ನ್ಯಾಯದ ತತ್ವಗಳನ್ನು ರಕ್ಷಿಸಿದ್ದ ನ್ಯಾಯಾಲಯಗಳಲ್ಲಿ ರಾಜಸ್ಥಾನ ಹೈಕೋರ್ಟ್ ಸಹ ಒಂದು ಎಂದು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಭಾನುವಾರ ಹೇಳಿದ್ದಾರೆ.
ರಾಜಸ್ಥಾನ ಹೈಕೋರ್ಟ್‌ನ 'ಪ್ಲಾಟಿನಂ ಜುಬಿಲಿ' ಸಮಾರಂಭ ಜೋಧ್‌ಪುರದಲ್ಲಿ ಭಾನುವಾರ ನಡೆಯಿತು.
'ನ್ಯಾಯಾಲಯವು ಸದಾ ಕಾನೂನಿನ ನಿಯಮಗಳನ್ನು ಪಾಲಿಸುತ್ತಿದೆ, ಗೌರವಿಸುತ್ತಿದೆ ಮತ್ತು ಅದರ ರಕ್ಷಣೆಗೆ ನಿಂತಿದೆ ಎಂಬುದಕ್ಕೆ ಅದೇ ಸಾಕ್ಷಿ' ಎಂದು ಶ್ಲಾಘಿಸಿದ್ದಾರೆ.
ರಾಜಸ್ಥಾನದಲ್ಲಿ ಮೂರೂ ಅಂಗಗಳು (ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ) ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ಹಾಗಾಗಿಯೇ ಹಲವು ಪ್ರಕರಣಗಳು ಪರಸ್ಪರ ಸಹಕಾರದಿಂದ ಇತ್ಯರ್ಥಗೊಂಡಿವೆ. ಇದರಿಂದಾಗಿ, ದೀರ್ಘ ಕಾಲ ಜನರು ಕಾನೂನು ಸಂಘರ್ಷ ನಡೆಸುವುದು ತಪ್ಪಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಹಳೇ ಕಾನೂನುಗಳನ್ನು ರದ್ದುಪಡಿಸಿ, ಹೊಸ ಕಾನೂನುಗಳನ್ನು ರೂಪಿಸಿದ್ದಾರೆ. ಇದರಿಂದ ನ್ಯಾಯಾಂಗದ ಪ್ರಕ್ರಿಯೆ ಸರಳವಾಗಿದೆ ಎಂದಿರುವ ಮುಖ್ಯಮಂತ್ರಿ, 'ಮಿಷನ್ ಕರ್ಮಯೋಗಿ'ಯು ಕಾನೂನು ಸಂಬಂಧಿ ವಿಷಯಗಳಲ್ಲಿ ಪರಿಣತಿ ಹೊಂದಲು ಅಧಿಕಾರಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ.
ರಾಜಸ್ಥಾನದ ಸುಮಾರು 5.3 ಲಕ್ಷ ಸಿಬ್ಬಂದಿ 'ಮಿಷನ್ ಕರ್ಮಯೋಗಿ' ಅಡಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 2.35 ಲಕ್ಷಕ್ಕೂ ಹೆಚ್ಚು ಮಂದಿ ಕೋರ್ಸ್‌ಗಳನ್ನು ಪೂರೈಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.