ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕ ಸ್ವರ ಚಿನ್ನಾರಿ ವತಿಯಿಂದ 'ಕೊಳಲನೂದುತಾ...'ಭಕ್ತಿ, ಭಾವ, ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಆ. 31ರಂದು ಸಂಜೆ 6ಕ್ಕೆ ಎಡನೀರು ಮಠದ ಶ್ರೀಭಾರತೀ ಸಭಾಂಗಣದಲ್ಲಿ ಜರುಗಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಶಿಷ್ಟಕಾರ್ಯಕ್ರಮ ಜರುಗಲಿದೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುವುದು. ಜಿಲ್ಲೆಯ ಪ್ರಮುಖ ಗಾಯಕರು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.