ಕೊಲ್ಲಂ: ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಭಯೋತ್ಪಾದನಾ ನಿಗ್ರಹ ದಳ ಮತ್ತೊಬ್ಬ ನಕ್ಸಲ್ ಮುಖಂಡ, ಮಲಪ್ಪುರಂ ನಿವಾಸಿ ಸಿ.ಪಿ ಮೊಯ್ದೀನ್‌ನನ್ನು ಬಂಧಿಸಿದೆ. ಕೊಲ್ಲಂ-ತ್ರಿಶ್ಯೂರ್ ಮಧ್ಯೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣದ ಮಧ್ಯೆ ಈತನನ್ನು ಬಂಧಿಸಲಾಗಿದೆ. ಸಿಪಿಐ(ಮಾವೋಯಿಸ್ಟ್)ಪಶ್ಚಿಮ ಘಟ್ಟದ ವಿಶೇಷ ಸಮಿತಿ ಸದಸ್ಯನಾಗಿರುವ ಮೊಯ್ದೀನ್ ನಕ್ಸಲ್ ಗುಂಪಿನ ಕೇರಳ ವಿಭಾಗವನ್ನು ನಿಯಂತ್ರಿಸುವ ನೇತಾರನಾಗಿದ್ದನು. ನಕ್ಸಲ್ ಚಟುವಟಿಕೆಗೆ ಸಂಬAಧಿಸಿ ಈತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಕೇಸು ದಾಖಲಾಗಿದೆ.
ಕುಖ್ಯಾತ ನಕ್ಸಲ್ ಮುಖಂಡ ಸೋಮನ್, ಮನೋಜ್ ಎಂಬವರನ್ನು ಇತ್ತೀಚೆಗಷ್ಟೆ ಉಗ್ರ ನಿಗ್ರಹ ದಳ ಬಂಧಿಸಿತ್ತು. ಇವರೆಲ್ಲರೂ ನಕ್ಸಲ್ ಮುಖಂಡ ಸೋಮನ್ ಗುಂಪಿನ ಸದಸ್ಯರಾಗಿದ್ದಾರೆ.