HEALTH TIPS

ಮುಂದುವರಿದ ಬಿರುಸಿನ ಮಳೆ, ಪನತ್ತಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳ ಸ್ಥಳಾಂತರ: ಇಂದೂ ಶಿಕ್ಷಣ ಸಂಸ್ಥೆಗಳಿಗೆ ರಜೆ

                ಕಾಸರಗೋಡು: ಬಿರುಸಿನ ಮಳೆ ಮುಂದುವರಿಯುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಬುಧವರವೂ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಭೂಕುಸಿತದ ಹಿನ್ನೆಲೆಯಲ್ಲಿ ಪನತ್ತಡಿ ಪಂಚಯಿತಿ ವ್ಯಾಪ್ತಿಯ 28ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಜಂಟಿಯಾಘಿ ಕಾರ್ಯಾಚರಣೆ ನಡೆಸುತ್ತಿದ್ದು, ಪಂಚಾಯಿತಿ ವ್ಯಾಪ್ತಿಯ ಕಲ್ಲಪಳ್ಳಿ ಹಾಗೂ ಕಮ್ಮಾಡಿ ಪತ್ತಕುಡಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊAಡವರಿಗೆ ಕಮ್ಮಾಡಿ ಎಂಜಿಎಲ್ ಹಾಗೂ ವಿವಿಧ ಮನೆಗಳಲ್ಲಿ ಆಶ್ರಯ ಕಲ್ಪಿಸಲಾಘಿದೆ.  ಪತ್ತಕುಡಿ ನಿವಾಸಿ ನಾರಾಯಣನ್ ಎಂಬವರ ಮನೆ ಗುಡ್ಡಕುಸಿತದಿಂದ ಹಾನಿಗೊಂಡಿದೆ. ಒಟ್ಟಕಂಡಿ ಮತ್ತು ಕುಟ್ಯಾನ ಕಾಲನಿಯ 20ರಷ್ಟು ಕುಟುಂಬಗಳನ್ನು ಚುಳ್ಳಿಕೆರೆ ಸರ್ಕಾರಿ ಎಲ್ಪಿ ಶಾಲೆಗೆ ಸ್ಥಳಾಂತರಿಸಲಾಗಿದೆ.  ಪನತ್ತಡಿಯ ಕಮ್ಮಾಡಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಹೆದ್ದಾರಿಯಲ್ಲಿ ನಿಯಂತ್ರಣ:

                ಕಾಸರಗೋಡಿನ ಚೆರ್ಕಳದಿಂದ ಚಟ್ಟಂಚಾಲ್ ವರೆಗಿನ ಷಟ್ಪಥ ರಸ್ತೆ ನಿರ್ಮಾಣ ಯೋಜನಾ ಪ್ರದೇಶದಲ್ಲಿ ಭೂಕುಸಿತದ ಭೀತಿ ಎದುರಾಗಿದ್ದು, ಆ. 7ರ ವರೆಗೆ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ.  ಅಲ್ಲದೆ ಪ್ರತ್ಯೇಕ ಜಾಗ್ರತಾ ನಿರ್ದೇಶ ಜಾರಿಗೊಳಿಸಲಾಗಿದೆ.

ಉಕ್ಕಿ ಹರಿದ ನದಿಗಳು:

                   ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಯ ಆಹ್ವಾನಿಸುತ್ತಿದೆ. ಉಪ್ಪಳ ಹೊಳೆ ತಂಬಿಕೊAಡಿದ್ದು, ಆಸುಪಾಸಿನ ತೋಟಗಳಿಗೂ ನೆರೆನೀರು ತುಂಬಿಕೊAಡಿದೆ. ಈಪ್ರದೇಶದ ಹಲವಾರು ಮನೆಗಳು ಅಪಯ ಎದುರಿಸುತ್ತಿದೆ.ಕುಂಬಳೆ ಸನಿಹದ ಉಳುವಾರು, ಬಂಬ್ರಾಣದಲ್ಲಿ ಸಿರಿಯ ಹೊಳೆ ಉಕ್ಕಿ ಹರಿಯುತಿದೆ. ಬಂಬ್ರಾಣದಲ್ಲಿ ಆಮಿನ ಎಂಬವರ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು.

ವಯನಾಡು ಜನತೆಗೆ ಪರಿಹಾರ ಸಾಮಗ್ರಿ:

                   ವಯನಾಡು ದುರಂತದ ಸಂತ್ರಸ್ತರಿಗೆ ಪರಿಹಾರ ನೆರವು ನೀಡುವಲ್ಲಿ ಕಾಸರಗೋಡು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕಾಸರಗೋಡು ವಿದ್ಯಾನಗರದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಾಗೂ  ಹೊಸದುರ್ಗ ತಾಲೂಕಿನಲ್ಲಿಯೂ ಅಗತ್ಯ ವಸ್ತುಗಳ ಸಂಗ್ರಹ ಕೇಂದ್ರ ಕಾರ್ಯಾಚರಿಸುತ್ತಿದ್ದು, ಜುಲೈ 30ರಿಂದ ಸಾಮಗ್ರಿಗಳನ್ನು ವಯನಾಡಿಗೆ ಲಾರಿಗಳ ಮೂಲಕ ಕಳುಹಿಸಿಕೊಡಲಾಗುತ್ತಿದೆ.  

ಆ. 1ರಂದು ಶಾಲೆಗಳಿಗೆ ರಜೆ:

                    ಬಿರುಸಿನ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆ. 1ರಂದು ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ. ಪೂರ್ವನಿಗದಿತ ಪರೀಕ್ಷೆಗಳು ಯಥಾಪ್ರಕಾರ ನಡೆಯಲಿದೆ. ಕಾಸರಗೋಡು ಅಲ್ಲದೆ ಕಣ್ಣೂರು ಹಾಗೂ ತೃಶ್ಯೂರ್ ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ.



  ಹೊಸದುರ್ಗ ತಾಲೂಕು ಕೇಂದ್ರದಲ್ಲಿ ವಯನಾಡು ಸಂತ್ರಸ್ತರಿಗಿರುವ ಪರಿಹಾರ ಸಾಮಗ್ರಿ ಅಪರಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಹಾಗೂ ತಹಸೀಲ್ದಾರ್ ಎಮ. ಮಾಯಾ ನೇತೃತ್ವದಲ್ಲಿ ಸಂಗ್ರಹಿಸಲಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries