ಕುಂಬಳೆ: ಬಟ್ಟೆ ವ್ಯಪಾರದ ಮರೆಯಲ್ಲಿ ಶಾಲಾ ಮಕ್ಕಳಿಗೆ ಮಾದಕ ದ್ರವ್ಯ ಒಳಗೊಂಡ ಇ-ಸಿಗರೇಟ್ ಮಾರಾಟ ನಡೆಸುತ್ತಿರುವ ಆರೋಪದನ್ವಯ ಬಂದ್ಯೋಡಿನ ಬಟ್ಟೆ ಅಂಗಡಿಯೊಂದಕ್ಕೆ ಕುಂಬಳೆ ಠಾಣೆ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ಇ-ಸಿಗರೇಟ್ ಹಾಗೂ ಮೂರು ಐಫೋನ್‍ಗಳನ್ನು ವಶಪಡಿಸಿಕೊಂದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ವಾಟ್ಸಪ್ ಸಂದೇಶ ಕಳುಹಿಸಿ, ಈ ಮೂಲಕ ವಿದ್ಯಾರ್ಥಿಗಳಿಗೆ ಇ-ಸಿಗರೇಟ್ ಬಗ್ಗೆ ಮಾಹಿತಿ ರವಾನಿಸಲಾಗುತ್ತಿರುವುದಾಗಿ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಪಾಲುದಾರರಾದ ಅಬೂಬಕ್ಕರ್ ಜಂಶೀರ್ ಹಾಗೂ ಶಿರಿಯ ನಿವಾಸಿ ಮೂಸಾ ಖಲೀಲ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇ-ಸಿಗರೇಟ್ ಮಾರಾಟದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುವುದು ಎಂದು ಕುಂಬಳೆ ಠಾಣೆ ಎಸ್.ಐ ಕೆ. ಶ್ರಿಜೇಶ್ ತಿಳಿಸಿದ್ದಾರೆ.