ಬದಿಯಡ್ಕ: ಹೊಸ ಅಧ್ಯಯನ ವರ್ಷದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಅನೇಕ ಕಾರ್ಯಚಟುವಟಿಕೆಗಳು ಶೈಕ್ಷಣಿಕವರ್ಷದಲ್ಲಿ ನಡೆಯುತ್ತಿದ್ದು,ಆಧುನಿಕ ಯುಗದಲ್ಲಿ ಉತ್ತಮ ರೀತಿಯಲ್ಲಿ ಕಂಪ್ಯೂಟರ್ ಉಪಯೋಗದ ಕುರಿತು ಪೆರಡಾಲ ನವಜೀವನ ಪ್ರೌಢಶಾಲೆಯ ಎಂಟನೇ ತರಗತಿಯಿಂದ ಆಯ್ದ 40 ಲಿಟಲ್ ಕೈಟ್ಸ್ ಯೂನಿಟ್‍ನ ಮಕ್ಕಳಿಗೆ ಕೈಟ್ಸ್ ಉಪಜಿಲ್ಲೆಯ ವಿಶೇಷ ತರಬೇತು ನೀಡಲಾಯಿತು.
ತರಬೇತುದಾರರಾದ ಪ್ರವೀಣ್ ಮಾಸ್ತರ್ ಮಕ್ಕಳಿಗೆ ತರಬೇತಿ ಮತ್ತು ಪೋಷಕರಿಗೆ ಮಾಹಿತಿಯನ್ನು ನೀಡಿದರು. ಉಪಜಿಲ್ಲೆಯಲ್ಲಿಯೇ ಮೊತ್ತ ಮೊದಲಾಗಿ ಅಭ್ಯಾಸ ಪುಸ್ತಕಗಳನ್ನು ತಯಾರಿಸಿ ಬಿಡುಗಡೆ ಮಾಡಲಾಯಿತು. ಮುಖ್ಯೋಪಾಧ್ಯಾಯನಿ ಮಿನಿ.ಪಿ, ಕಾರ್ಯದರ್ಶಿ ಶಶಿಧರನ್ ನಂಬಿಯಾರ್, ಶಾಲಾ ಕಂಪ್ಯೂಟರ್ ತರಬೇತುದಾರರಾದ ಹರೀಶ್. ಎಸ್. ಕೆ., ಬಿಂದು ಟೀಚರ್, ಕೈಟ್ಸ್‍ನ ಶಾಲಾ ವಿಶೇಷ ತರಬೇತುದಾರೆ ಶ್ರೀಜಾ ನಾಯರ್, ವೆಂಕಟಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.