ಕುಂಬಳೆ: ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವಿನಲ್ಲಿ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗೊಂದಿಗೆ ಸಂಪನ್ನಗೊಂಡಿತು. ಅತಿಥಿಗಳಾಗಿ ಆಗಮಿಸಿದ ಸಿಎ. ಕೃಷ್ಣ ಮೋಹನ ಶೇಡಿಗುಮ್ಮೆ' ರಾಮನ ಉತ್ತಮ ಗುಣಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು 'ಎಂದರಲ್ಲದೆ, ವಿದ್ಯಾಲಯದ ಕಾರ್ಯಚಟುವಟಿಕೆಗಳನ್ನು ಮೆಚ್ಚಿಕೊಂಡರು.
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಕ್ಕಳಿಗೆ ತಮ್ಮ ಸತ್ಸಂಗದ ಅವಧಿಯಲ್ಲಿ ರಾಮಾಯಣದ ಶ್ರವಣ, ಮನನದ ಮಹತ್ವದ ಪರಿಚಯ ನೀಡಿದರು. ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ಯಾಮರಾಜ ದೊಡ್ಡಮಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮಾಯಣ ಮಾಸಾಚರಣೆಯ ಸಲುವಾಗಿ ವಿವಿಧ ಕಾರ್ಯಕ್ರಮಗಳು ಜರಗಿತು.
ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಮುಖ್ಯೋಪಾಧ್ಯಾಯರಾದ ಶ್ರೀ ಶ್ಯಾಮ್ ಭಟ್ ದರ್ಬೆ ಮಾರ್ಗ, ಸಹ ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಕುಮಾರಿ ವೈಷ್ಣವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಕನಿಹ ಸ್ವಾಗತಿಸಿ ಶಾಶ್ವತ್ ವಂದಿಸಿದರು.