ಕಾಸರಗೋಡು: ರಾಣಿಪುರಂ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಚರಿಸುವ ಫುಟ್ ಪಾತ್ ಸಮೀಪದ ಹುಲ್ಲುಗಾವಲಿನಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ.
ಈ ಕಾರಣದಿಂದ ಮಣಿಮಾಲಾ ಚಾರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನಿತ್ಯ ಬೆಳಗ್ಗೆ ಅರಣ್ಯ ಇಲಾಖೆ ಅಧೀನದ ಸಿಬ್ಬಂದಿ ರಸ್ತೆಯಲ್ಲಿ ಕಾಡಾನೆ ಇಲ್ಲದಂತೆ ನೋಡಿಕೊಳ್ಳುತ್ತಾರೆ.
ಆದರೆ ನಿನ್ನೆ ಬೆಳಗ್ಗೆ ನಡೆಸಿದ ತಪಾಸಣೆ ವೇಳೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಂಜು ಕವಿದಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಪಾಯದ ಭೀತಿಯನ್ನು ಕಂಡಿದ್ದಾರೆ.