ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗವು ಹೇಮಾ ಸಮಿತಿ ವರದಿಯ ಅವಲೋಕನಕ್ಕೆ ಸಭೆ ನಡೆಸಲಿದೆ. ವರದಿಯ ಪ್ರತಿಯನ್ನು ಕೋರಿ ಆಯೋಗವು ಕೇರಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ವರದಿಯ ಸಂಪೂರ್ಣ ಆವೃತ್ತಿಯನ್ನು ಕಳಿಸಲು ಆಯೋಗವನ್ನು ಕೇಳಿದೆ.
ಸಿನಿಮಾ ಸೇರಿದಂತೆ ಅಸಂಘಟಿತ ವಲಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಸಿನಿಮಾದಲ್ಲಿ ಡ್ರಗ್ಸ್ ನ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ವಿಶೇಷ ತಂಡವನ್ನು ನೇಮಿಸುವಂತೆಯೂ ಮಹಿಳಾ ಆಯೋಗಕ್ಕೆ ಮನವಿ ಮಾಡಲಾಗಿತ್ತು.
ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾಚಸ್ಪತಿ, ಸಮಿತಿ ಸದಸ್ಯ ಪಿ. ಆರ್. ಶಿವಶಂಕರನ್ ಆಯೋಗಕ್ಕೆ ನೇರವಾಗಿ ಮನವಿ ಸಲ್ಲಿಸಿದ್ದರು.
ಆಯೋಗದ ಸದಸ್ಯ ಕಾರ್ಯದರ್ಶಿ ಮೀನಾಕ್ಷಿ ನೇಗಿ ಮತ್ತು ಸದಸ್ಯೆ ಡೆಲಿನಾ ಕೊಂಗ್ಡುಪ್ ಅವರು ಮನವಿಯನ್ನು ಸ್ವೀಕರಿಸಿದರು. ಆಯೋಗವು ಮನವಿಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.