ಕುಂಬಳೆ: ತೆಂಗಿನ ಮರಗಳಿಗೆ ಬಾಧಿಸತೊಡಗಿದ ಅಪೂರ್ವ ರೋಗದಿಂದಾಗಿ ಕೃಷಿಕರು ತೀವ್ರ ಆತಂಕಿತರಾಗಿದ್ದಾರೆ. ಆರಂಭದಲ್ಲಿ ಗರಿಗಳು ಒಣಗತೊಡಗುತ್ತಿದ್ದು, ಅದು ಕ್ರಮೇಣ ಮುಂದುವರಿದು ಕೊನೆಗೆ ತೆಂಗಿನ ಮರದ ತುದಿ ಪೂರ್ಣವಾಗಿ ಒಣಗಿ ನಾಶಗೊಳ್ಳುತ್ತಿದೆ. ಹೊಸ ರೋಗವೆಂದು ಕೃಷಿಕರು ತಿಳಿಸಿದ್ದಾರೆ.
ಮೊಗ್ರಾಲ್ ಪುತ್ತೂರು ರಾಷ್ಟಿçÃಯ ಹೆದ್ದಾರಿ ಬದಿ, ಹೊಳೆ ಸಮೀಪದಲ್ಲಿ ಹಲವು ತೆಂಗಿನ ಮರಗಳಿಗೆ ಈ ರೋಗ ಬಾಧಿಸಿದೆ. ಈ ಹಿಂದೆ ಬದಿಯಡ್ಕ, ಎಣ್ಮಕಜೆ, ಪುತ್ತಿಗೆ, ಕುಂಬಳೆ ಭಾಗದಲ್ಲಿ ಇದೇ ರೀತಿಯ ರೋಗ ಕಂಡುಬAದಿತ್ತು. ತೆಂಗಿನ ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ಥಾಪಿಸಿದ ಸಿಪಿಸಿಆರ್‌ಐ ಪರಿಸರದಲ್ಲೇ ತೆಂಗಿನ ಮರಗಳು ರೋಗ ಬಾಧಿಸಿ ಸಾಯತೊಡಗಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ರಾಷ್ಟಿçÃಯ ಹೆದ್ದಾರಿ ಬದಿಗಳಲ್ಲಿ ಕಂಡುಬAದಿರುವ ತೆಂಗುಕ್ಷಯ ರೋಗಕ್ಕೆ ಹೆದ್ದಾರಿಯ ಕಾಮಗಾರಿ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಹೆದ್ದಾರಿ ಕಾಮಗಾರಿಗಳಿಗಾಗಿ ಭಾರೀ ಪ್ರಮಾಣದ ಮಣ್ಣು ಅಗೆತಗಳು ನಡೆದಿವೆ. ಜೊತೆಗೆ ಬೃಹತ್ ಮರಗಳಿಗೂ ಕೊಡಲಿಯೇಟು ಬಿದ್ದಿರುವುದರಿಂದ ಉಷ್ಣತಾಮಾನ ಏರಿಕೆ ಕಂಡುಬAದಿದೆ. ಈ ಬಗ್ಗೆ ಪರಿಸರ ಅಧ್ಯಯನದ ಅಗತ್ಯವಿದೆ.
ಒಳನಾಡುಗಳ ತೆಂಗು ಸಾಯುವ ರೋಗಕ್ಕೆ ಫಂಗಸ್ ಕಾರಣ ಎಂಬುದು ತಜ್ಞರ ಅಭಿಮತ. ಹೆಚ್ಚಿನ ಪ್ರಮಾಣದ ಮಳೆಯ ಕಾರಣ ಫಂಗಸ್ ಉತ್ಪತ್ತಿಯಾಗಿ ಕಳೆತಕ್ಕೆ ಕಾರಣವಾಗುತ್ತಿದೆ. ಇದು ನಿಧಾನಕ್ಕೆ ಇತರ ಮರಗಳಿಗೂ ವ್ಯಾಪಿಸಿ ಮರ ಸಾಯಲು ಕಾರಣವಾಗುತ್ತಿದೆ.
ತೆಂಗು ಕೃಷಿಕರ ಆತಂಕಕ್ಕೆ ತಜ್ಞರ ಸಲಹೆ ಪಡೆಯಬೇಕಾದ ಅಗತ್ಯ ತುರ್ತು ಇದೆ. ಜಿಲ್ಲೆಯಲ್ಲೇ ಇರುವ ಸಿ.ಪಿ.ಸಿ.ಆರ್.ಐ.ಯ ತಜ್ಞರ ನಿರ್ದೇಶಾನುಸಾರ ತೆಂಗಿನ ರೋಗ ವಿಮುಕ್ತಿಗೆ ಕೃಷಿಕರು ಮುಂದಾಗಬೇಕು.
ಅಭಿಮತ:
ತೆಂಗಿನ ಈ ಅಪೂರ್ವ ರೋಗಕ್ಕೆ ಫಂಗಸ್ ಕಾರಣ.ಇದಕ್ಕೆ ವಿಶೇಷ ಆರೈಕೆ ಅಗತ್ಯ. ಈ ನಿಟ್ಟಿನಲ್ಲಿ ಸಿಪಿಸಿಆರ್.ಐ.ಯಲ್ಲಿ ಅಗತ್ಯದ ಬೆಂಬಲ ನೀಡಲಾಗುವುದು. ಕೃಷಿಕರು ಸಂಪರ್ಕಿಸಬಹುದು.
ಮೊಗ್ರಾಲ್ ಪುತ್ತೂರು ಪ್ರದೇಶ ಸಹಿತ ರಾ.ಹೆದ್ದಾರಿ ಅಕ್ಕಪಕ್ಕದ ತೆಂಗಿನ ಮರಗಳ ನಾಶಕ್ಕೆ ಮಣ್ಣು ನಾಶ ಕಾರಣವೆಂದು ಪ್ರಾಥಮಿಕ ತೀರ್ಮಾನವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು.
-ಡಾ.ವಿನಾಯಕ ಹೆಗಡೆ
ಸಸ್ಯ ಸಂರಕ್ಷಣಾ ಮುಖ್ಯಸ್ಥ. ಸಿ.ಪಿ.ಸಿ.ಆರ್.ಐ.ಕಾಸರಗೋಡು