ಕೊಚ್ಚಿ; ಎರ್ನಾಕುಳಂ ಮಜುವನ್ನೂರ್ ಕಾಲೇಜು ಶಿಕ್ಷಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೋಲೀಸರು ಹೇಳಿದ್ದಾರೆ. ವೆನ್ನಿತ್ ವಿ.ಎಸ್.ಚಂದ್ರಲಾಲಿ (41) ಎಂಬುವರು ಮನೆ ಸಮೀಪದ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೊಟ್ಟೆ ಹರಿದು ಆಂತರಿಕ ಅಂಗಾಂಗಗಳು ತೆರೆದುಕೊಂಡ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
ಹಿಂದಿ ಪ್ರಾಧ್ಯಾಪಕರಾಗಿದ್ದ ಚಂದ್ರಲಾಲ್ ಎರಡು ವಾರಗಳ ಕಾಲ ಕಾಲೇಜಿಗೆ ರಜೆ ಹಾಕಿದ್ದರು. ಅವರ ತಂದೆ ಮೂರು ತಿಂಗಳ ಹಿಂದೆ ನಿಧನರಾಗಿದ್ದರು. ತಂದೆಯ ಸಾವಿನಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ಮತ್ತು ಹತ್ತಿರದ ನಿವಾಸಿಗಳು ಹೇಳಿರುವರು.
ಚಂದ್ರಲಾಲ್ ಮಧ್ಯಾಹ್ನ ಹಿತ್ತಲಿಗೆ ಹೋಗುವುದನ್ನು ನೆರೆಹೊರೆಯವರು ನೋಡಿದ್ದರು. ಸಂಜೆ ನೆರೆಹೊರೆ ಮಹಿಳೆಗೆ ಮೃತ ದೇಹ ಕಾಣಿಸಿದೆ. ಪೆÇಲೀಸರ ಪ್ರಕಾರ, ಚಂದ್ರಲಾಲ್ ಮಾನಸಿಕ ಅಸ್ವಸ್ಥನಾಗಿದ್ದು, ತನ್ನ ದೇಹವನ್ನೇ ಗಾಯ ಮಾಡಿಕೊಂಡಿದ್ದಾನೆ. ಇದಕ್ಕಾಗಿ ಆತ ಚಿಕಿತ್ಸೆ ಪಡೆಯುತ್ತಿದ್ದ ಎಂದು ವರದಿಯಾಗಿದೆ.