ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಎ ಅವರು ಕಯ್ಯಾರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದರು. ಅನ್ನಪೂರ್ಣ, ಶುಭ ಕಣ್ಣೂರು, ಹೇಮಲತ ಎನ್ ಶುಭಾಶಂಸನೆಗೈದರು. ವಿದ್ಯಾರಂಗದ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ರಕ್ಷಾ ಪೆರ್ಣೆ ಸ್ವಾಗತಿಸಿ ಶಾಲಾ ನಾಯಕ ಜೀವನ್ ಕುಮಾರ್ ವಂದಿಸಿದರು. ಸ್ಮಿತ ವಿ ಮುಳಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಬಂಬ್ರಾಣ, ಗಾಯತ್ರಿ, ಮಂಗಳಗೌರಿ, ವಿಜಯ ಲಕ್ಷ್ಮಿ, ಧನ್ಯ, ಪ್ರಜ್ಞ ಉಪಸ್ಥಿತರಿದ್ದರು.