ಕಾಸರಗೋಡು: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸ್ಥಳೀಯ ಭಾಷೆಗಳ ಸಂರಕ್ಷಣೆಗೆ ಸಮಾಜವು ಬದ್ಧವಾಗಿದೆ ಮತ್ತು ಕೃತಕ ಬುದ್ಧಿಮತ್ತೆಯ ಪ್ರಸ್ತುತ ಸನ್ನಿವೇಶದಲ್ಲಿ ಅದರ ಸಾಮಥ್ರ್ಯವನ್ನು ಬಳಸಿಕೊಳ್ಳುವ ಭರವಸೆ ಅಡಕವಾಗಿರುವುದಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ ಹೇಳಿದರು.
ಅವರು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ ಕ್ಯಾಂಪಸ್‍ನಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ಬಹುಭಾಷಾ ಅಧ್ಯಯನ ಕೇಂದ್ರ ಮತ್ತು ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ವಿಜ್ಞಾನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಕಣ್ಣೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎ. ಅಶೋಕ ಅಧ್ಯಕ್ಷತೆ ವಹಿಸಿದ್ದರು.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪೆÇ್ರ. ವಾಸು ರಂಗನಾಥನ್ ಪ್ರಧಾನ ಭಾಷಣ ಮಾಡಿದರು. ಸಮಾರಂಭದಲ್ಲಿ ಅಲ್ಪಸಂಖ್ಯಾತ ಭಾಷೆಗಳ ರಕ್ಷಣೆಗೆ ಸಂಬಂಧಿಸಿದ ಯೋಜನಾ ದಾಖಲೆಯನ್ನು ಉಪಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹಸ್ತಾಂತರಿಸಿದರು. ಪೆÇ್ರ. ಉಮಾಮಹೇಶ್ವರ ರಾವ್, ಪೆÇ್ರ. ಜೋಸೆಫ್ ಕೋಯಿಪಲ್ಲಿ, ಡಾ. ರಿಜು ಮೋಲ್, ಡಾ. ಪಿ.ಕೆ. ಜಯರಾಜನ್, ಡಾ. ತೆನ್ನರಸು, ಡಾ. ಎ.ಎಂ. ಶ್ರೀಧರನ್ ಉಪಸ್ಥಿತರಿದ್ದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ ಪೆÇ್ರ. ಎಂ.ಸಿ ಕೇಶವಮೂರ್ತಿ, ಪೆÇ್ರ.ಆರ್. ಶರಣ್ಯ, ಪೆÇ್ರ. ಪ್ರಜಿತಾ. ಪಿ, ಡಾ. ವಿ. ಬಾಲಕೃಷ್ಣನ್, ಡಾ. ಜಿ. ಪಳನಿ ರಾಜನ್, ಅನಿಲ್ ವಿ. ಕುಮಾರ್, ಸ್ಯಾನ್ ಜೋಸ್ ಜಾರ್ಜ್, ಅರೋಮಲ್, ಜೆಬಿ ಮರಿಯಮ್ ಕುರಿಯನ್, ವಿ.ಎಸ್. ಗೌರಿಶಂಕರಿ ಪ್ರಬಂಧ ಮಂಡಿಸಿದರು.