ಮುಳ್ಳೇರಿಯ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ವತಿಯಿಂದ ನಗದು ಪುರಸ್ಕಾರ ವಿತರಣಾ ಸಮಾರಂಭ ಆ. 25ರಂದು ಬೆಳಗ್ಗೆ 10ಕ್ಕೆ ಮುಳ್ಳೇರಿಯ ಯಾದವ ಸಭಾ ಭವನದಲ್ಲಿ ಜರುಗಲಿದೆ.
ಅಖಿಲ ಕೇರಳ ಯಾದವ ಸಭಾ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಬಾಬು ಪುಣಿಯೂರ್ ಉದ್ಘಾಟಿಸುವರು. ಯಾದವ ಸಭಾ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸುವರು. ಸಹಾಯಕ ಪಬ್ಲಿಕ್ ಪ್ರೋಸಿಕ್ಯೂಟರ್ ವಕೀಲ ಚಂದ್ರಶೇಖರನ್, ವಕೀಲ ಎಂ. ಗೋಪಾಲ ಮಣಿಯಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕ್ರೀಡಾಪಟು ಮಾಸ್ಟರ್ ಸಿದ್ಧಾರ್ಥ್ ಅವರನ್ನು ಸನ್ಮಾನಿಸಲಾಗುವುದು. ಡಾ> ಕಿಶೋರ್ ಕುಮಾರ್, ಸತ್ಯನಾರಾಯಣ ಏಣಿಯರ್ಪು, ಉದಯ ಕುಮಾರ್ ಬದಿಯಡ್ಕ, ಶಿವಪ್ರಸಾದ್ ಕಡಾರ್, ಅರವಿಂದಾಕ್ಷನ್, ಕುಸುಮಾ ಟೀಚರ್, ಕೆ. ಗಂಗಾಧರ ತೆಕ್ಕೆಮೂಲೆ, ರಾಮಚಂದ್ರ ಅತ್ತನಾಡಿ ಮೊದಲಾದವರು ಭಾಗವಹಿಸುವರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದು ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.