ಹೈದರಾಬಾದ್: ರಾಷ್ಟ್ರಪಕ್ಷಿ ನವಿಲಿನ ಮಾಂಸದಿಂದ ಖಾದ್ಯ ತಯಾರಿಸುವ ವಿಡಿಯೊ ಹಂಚಿಕೊಂಡಿದ್ದ ಯುಟ್ಯೂಬರ್ ಮೇಲೆ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದೆ.
ನವಿಲು ಖಾದ್ಯ ತಯಾರಿಕೆಯ ವಿಡಿಯೊ: ಯುಟ್ಯೂಬರ್ ಮೇಲೆ ಪ್ರಕರಣ ದಾಖಲು
0
ಆಗಸ್ಟ್ 13, 2024
Tags
ಹೈದರಾಬಾದ್: ರಾಷ್ಟ್ರಪಕ್ಷಿ ನವಿಲಿನ ಮಾಂಸದಿಂದ ಖಾದ್ಯ ತಯಾರಿಸುವ ವಿಡಿಯೊ ಹಂಚಿಕೊಂಡಿದ್ದ ಯುಟ್ಯೂಬರ್ ಮೇಲೆ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದೆ.
ವೀಕ್ಷಕರಿಂದ ಹೆಚ್ಚಿನ ವೀಕ್ಷಣೆ(ವ್ಯೂಸ್) ಪಡೆಯುವ ಹಂಬಲದಿಂದ ಆರೋಪಿಯು ಈ ವಿಡಿಯೊವನ್ನು ತನ್ನ ಯುಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವ್ಯಕ್ತಿಯೊಬ್ಬ ನವಿಲು ಖಾದ್ಯ ತಯಾರಿಸುವ ಬಗೆಯನ್ನು ವಿವರಿಸುವ ವಿಡಿಯೊ ಹಂಚಿಕೊಂಡಿರುವುದಾಗಿ ಮಾಹಿತಿ ಸಿಕ್ಕಿತ್ತು. ಮಾಹಿತಿಯನ್ನಾಧರಿಸಿ ಅರಣ್ಯ ಅಧಿಕಾರಿಗಳು ರಾಜನ್ನ ಸಿರಿಸಿಲ್ಲ ಜಿಲ್ಲೆಯ ತಂಗಲ್ಲಪಲ್ಲಿಯಲ್ಲಿರುವ ಆರೋಪಿಯ ನಿವಾಸಕ್ಕೆ ತೆರಳಿ ಕೋಳಿ ಮಾಂಸದ ಖಾದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ವಶಪಡಿಸಿಕೊಳ್ಳಲಾದ ಮಾಂಸ ಖಾದ್ಯದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಪರೀಕ್ಷೆಗೆಂದು ಕಳುಹಿಸಲಾಗಿದೆ. ಪ್ರಾಣಿ ಹಕ್ಕುಗಳ ಹೋರಾಟಗಾರರ ಮನವಿಯಂತೆ ಆ ನಿರ್ದಿಷ್ಟ ವಿಡಿಯೊವನ್ನು ಯುಟ್ಯೂಬ್‌ನಿಂದ ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.