ಕಾಸರಗೋಡು: ಮುಖ್ಯಮಂತ್ರಿಗಳ ದುರಂತ ಪರಿಹಾರ ನಿಧಿಗೆ ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಜಿಲ್ಲಾ ಘಟಕದ ಪ್ರಥಮ ಕಂತು ಇಪ್ಪತೈದು ಸಾವಿರ ರೂ. ಗಳನ್ನು ಜಿಲ್ಲಾಧ್ಯಕ್ಷ ಎನ್.ಎಂ.ನಾರಾಯಣನ್ ನಂಬೀಶನ್ ಎಸ್.ಪಿ.ಎಸ್.ಎಸ್ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಸನೋಜ್ ಕೆ.ಎಂ ಯವರಿಗೆ ಚೆಕ್ ಹಸ್ತಾಂತರಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಜೇಶ್ ಇ, ಜಿಲ್ಲಾ ಖಜಾಂಚಿ ಶ್ರೀದೇವಿ ಎಂ, ಜಿಲ್ಲಾ ಜತೆ ಕಾರ್ಯದರ್ಶಿ ಸೋಮನಾಥನ್ ಎಂ, ಜಿಲ್ಲಾ ಮಹಿಳಾ ವೇದಿಕೆ ಅಧ್ಯಕ್ಷೆ ಶೈಲಜಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಸರಗೋಡು ಪ್ರಾದೇಶಿಕ ಸಭೆಯ ಕೋಶಾಧಿಕಾರಿ ಶ್ರೀಪ್ರಿಯಾ ರಾಜೇಶ್, ಹೊಸದುರ್ಗ ಪ್ರಾದೇಶಿಕ ಸಮಿತಿ ಜೊತೆ ಕಾರ್ಯದರ್ಶಿ ವಿಷ್ಣು ಪ್ರಸಾದ್, ಕೇಂದ್ರ ಪ್ರತಿನಿಧಿ ರಾಧಾಕೃಷ್ಣನ್ ಕೆ.ಎಂ, ಹೊಸದುರ್ಗ ಮಹಿಳಾ ವೇದಿಕೆ ಉಪಾಧ್ಯಕ್ಷೆ ಶ್ರೀಜಾ ರಾಧಾಕೃಷ್ಣನ್, ಕೋಶಾಧಿಕಾರಿ ವಾರಿಜಾ ಟೀಚರ್, ಯುವ ವೇದಿಕೆಯ ಪದಾಧಿಕಾರಿಗಳಾದ ಅಮೃತಾ ಸನೋಜನ್, ಸುಚಿತ್ರಾ ಮಾತನಾಡಿದರು.