ಗುವಾಹಟಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಪೊಲೀಸ್ ವಶದಿಂದ ತಪ್ಪಿಸಿಕೊಂಡು, ಕೆರೆಗೆ ಹಾರಿ ಸಾವಿಗೀಡಾದ ಘಟನೆ ಅಸ್ಸಾಂನ ನಗೋನ್ ಜಿಲ್ಲೆಯ ದಿಂಗ್ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು.

'ಪೊಲೀಸ್ ವಶದಿಂದ ಆರೋಪಿ ತಪ್ಪಿಸಿಕೊಂಡ ಆರೋಪಿ ಕೆರೆಗೆ ಹಾರಿದ್ದಾನೆ. ತಕ್ಷಣವೇ ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಎರಡು ತಾಸಿನ ಬಳಿಕ ಮೃತದೇಹ ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಬರುತ್ತಿದ್ದ 14 ವರ್ಷದ ಬಾಲಕಿಯನ್ನು, ಬೈಕ್‌ನಲ್ಲಿ ಬಂದ ಮೂವರು ಸುತ್ತುವರಿದು ಅತ್ಯಾಚಾರ ಎಸಗಿದ್ದರು. ಗುರುವಾರ ಸಂಜೆ ಧಿಂಗ್ ಎಂಬಲ್ಲಿ ಈ ಘಟನೆ ನಡೆದಿತ್ತು.
ಗಾಯಗೊಂಡು ಮೂರ್ಚೆ ಹೋಗಿದ್ದ ಬಾಲಕಿ ಕೆರೆ ಸಮೀಪದ ರಸ್ತೆ ಬದಿಯಲ್ಲಿ ಬಿದ್ದಿದ್ದಳು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಿದ್ದರು. ಇನ್ನೊಬ್ಬನನ್ನು ವಶಕ್ಕೆ ಪಡೆದಿದ್ದು, ಮೂರನೆಯವನ ಬಂಧನಕ್ಕೆ ಶೋಧ ಆರಂಭಿಸಲಾಗಿತ್ತು.