ಉಪ್ಪಳ: ಮಂಗಲ್ಪಾಡಿ ಅಂಬಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮಜಯಂತಿ ಕಾರ್ಯಕ್ರಮ ಆ. 20ರಂದು ಜರುಗಲಿದೆ.
ಬೆಳಗ್ಗೆ 8ಕ್ಕೆ ಗಣಪತಿ ಹವನ, 10ಕ್ಕೆ ಭಜನೆ, 11.30ಕ್ಕೆ ಧಾರ್ಮಿಕ ಸಭೆ ನಡೆಯುವುದು.
ಸಭಾ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗುಳಿಗ ದೈವದ ಪಾತ್ರಿ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸುವರು. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಧಾರ್ಮಿಕ ಭಾಷಣ ಮಾಡುವರು. ಸುಧಾಕರ ಶೆಟ್ಟಿ ತೋಟ, ಮಂಗಲ್ಪಾಡಿ ಗ್ರಾಪಂ ಸದಸ್ಯೆ ಸುಧಾಗಣೇಶ್ ಪಾಲ್ಗೊಳ್ಳುವರು. ಪ್ರತಿಭಾ ಪುರಸ್ಕಾರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯುವುದು.