HEALTH TIPS

ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ: ಪ್ರತಿಕ್ರಿಯೆ ಸಲ್ಲಿಕೆಗೆ ಅವಧಿ ವಿಸ್ತರಣೆ

 ವದೆಹಲಿ: ವ್ಯಾಪಕ ಸಮಾಲೋಚನೆಗಳ ನಂತರವೇ ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆಗೆ ಸಂಬಂಧಿಸಿದ ಹೊಸ ಕರಡುವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ನಡುವೆ, ಕರಡು ಮಸೂದೆ ಕುರಿತಂತೆ ಪ್ರತಿಕ್ರಿಯೆಗಳು/ಸಲಹೆಗಳನ್ನು ಸಲ್ಲಿಸಲು ನೀಡಿದ್ದ ಅವಧಿಯನ್ನು ಅಕ್ಟೋಬರ್‌ 15ರ ವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಸಚಿವಾಲಯವು ಕಳೆದ ವರ್ಷ ನವೆಂಬರ್‌ 10ರಂದು ಕರಡು ಮಸೂದೆಯನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿತ್ತು. ಭಾಗೀದಾರರು ಮತ್ತು ಸಾರ್ವಜನಿಕರ ಪ್ರತಿಕ್ರಿಯೆಗಳಿಗೆ ವಿವರಣೆ ಒಳಗೊಂಡ ಟಿಪ್ಪಣಿಗಳನ್ನು ಸಹ ಪ್ರಕಟಿಸಿತ್ತು.

ಆದರೆ, ಸುಧಾರಿತ ಕರಡು ಮಸೂದೆ ಕುರಿತು ವ್ಯಾಪಕ ಟೀಕೆಗಳೂ ವ್ಯಕ್ತವಾಗಿದ್ದವು. ಪ್ರಚಲಿತ ವಿದ್ಯಮಾನಗಳ ಕುರಿತ ವಿಷಯವಸ್ತುಗಳನ್ನು ಸಿದ್ಧಪಡಿಸುವವರನ್ನು ಒಟಿಟಿ ಅಧವಾ 'ಡಿಜಿಟಲ್‌ ಬ್ರಾಡ್‌ಕಾಸ್ಟರ್‌'ಗಳು ಎಂಬುದಾಗಿ ಪರಿಗಣಿಸುವ ಅಂಶವನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿರಲಿಲ್ಲ ಎಂಬುದು ಸೇರಿದಂತೆ ಹಲವು ಟೀಕೆಗಳು ಕೇಳಿಬಂದಿದ್ದವು.

ಟೀಕೆಗಳ ಹಿನ್ನೆಲೆಯಲ್ಲಿ, ಪ್ರತಿಕ್ರಿಯೆ ಸಲ್ಲಿಸುವ ಅವಧಿಯನ್ನು ಅಕ್ಟೋಬರ್‌ 15ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿರುವ ಸಚಿವಾಲಯ, ವ್ಯಾಪಕ ಸಮಾಲೋಚನೆ ನಂತರ ಹೊಸ ಕರಡು ಮಸೂದೆಯನ್ನು ಪ್ರಕಟಿಸಲಾಗುವುದು ಎಂದು 'ಎಕ್ಸ್‌'ನಲ್ಲಿ ಹೇಳಿದೆ.

ಆರೋಪ: 'ಸಚಿವಾಲಯವು ಆಯ್ದ ಭಾಗೀದಾರರೊಂದಿಗೆ ರಹಸ್ಯವಾಗಿ ಸಭೆ ನಡೆಸಿದೆ. ಡಿಜಿಟಲ್‌ ಮಾಧ್ಯಮ ಕ್ಷೇತ್ರದ ಸಂಘಟನೆಗಳು, ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಸ್ತೃತ ಚರ್ಚೆಗಳು ನಡೆದಿಲ್ಲ' ಎಂದು ಡಿಜಿಪಬ್ ನ್ಯೂಸ್‌ ಇಂಡಿಯಾ ಫೌಂಡೇಷನ್, ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಕಳೆದ ವಾರ ಆರೋಪಿಸಿದ್ದವು.

ಡಿಜಿಪಬ್‌ ನ್ಯೂಸ್‌ ಇಂಡಿಯಾ ಫೌಂಡೇಷನ್, 90ಕ್ಕೂ ಹೆಚ್ಚು ಸುದ್ದಿಸಂಸ್ಥೆಗಳನ್ನು ಪ್ರತಿನಿಧಿಸುತ್ತಿದೆ.

ಕರಡು ಮಸೂದೆಯ ಪ್ರಮುಖ ಅಂಶಗಳು

  • ಆನ್‌ಲೈನ್‌ ವೇದಿಕೆಗಳಿಗೆ ವಿಷಯವಸ್ತು ಸಿದ್ಧಪಡಿಸುವವರನ್ನು ಒಟಿಟಿ ಬ್ರಾಡ್‌ಕಾಸ್ಟರ್ಸ್‌ ಅಥವಾ ಡಿಜಿಟಲ್ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಎಂದು ಪರಿಗಣಿಸುವ ಅವಕಾಶವನ್ನು ಒಳಗೊಂಡಿದೆ. ಯುಟ್ಯೂಬ್‌, ಇನ್‌ಸ್ಟಾಗ್ರಾಮ್‌ ಮೂಲಕ ಕಾರ್ಯನಿರ್ವಹಿಸುವ ಸ್ವತಂತ್ರ ಪತ್ರಕರ್ತರು ಈ ವ್ಯಾಪ್ತಿಯಲ್ಲಿ ಬರುತ್ತಾರೆ

  • ಆನ್‌ಲೈನ್ ವಿಷಯವಸ್ತು ಸಿದ್ಧಪಡಿಸುವವರು ದೂರುಗಳ ಪರಿಹಾರ ಅಧಿಕಾರಿ ನೇಮಕ ಮಾಡುವುದನ್ನು ಕಡ್ಡಾಯಗೊಳಿಸುವ ಅವಕಾಶವನ್ನು ಒಳಗೊಂಡಿದೆ.

  • ಚಂದಾದಾರರ ಸಂಖ್ಯೆ ನಿರ್ದಿಷ್ಟ ಮಿತಿಯನ್ನು ದಾಟಿದ ನಂತರ, ವಿಷಯವಸ್ತು ಮೌಲ್ಯಮಾಪನ ನಡೆಸಬೇಕು. ಇದಕ್ಕಾಗಿ ಸಮಿತಿ ರಚನೆ ಮಾಡಬೇಕು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries