ಮಂಜೇಶ್ವರ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಚೆನ್ನೈಯು ಶ್ರೀನಗರದ ರಾಘವೇಂದ್ರ ಸ್ವಾಮಿ ಕ್ಷೇತ್ರದಲ್ಲಿ ಚಾತುರ್ಮಾಸ ವ್ರತಸ್ಥರಾಗಿರುವ ಪ್ರಯುಕ್ತ ಕಣ್ವತೀರ್ಥ ಶ್ರೀಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದಲ್ಲಿ ಮಂಜೇಶ್ವರ ಶನೀಶ್ವರ ದೇವಸ್ಥಾನದ ಆದಿಶಕ್ತಿ ಕುಣಿತ ಭಜನೆ ತಂಡದವರಿಂದ ಕುಣಿತ ಭಜನೆ, ದೇವಸ್ಥಾನದ ಸ್ವಚ್ಚತಾ ಚಟುವಟಿಕೆ ಮತ್ತು ಕ್ಷೇತ್ರದ ಪರಿಸರದಲ್ಲಿ ಫಲವಸ್ತು ಗಿಡಗಳ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಾಜ ಸೇವೆಕ ಮುಟ್ಟ ಶ್ರೀಧರ್ ಶೆಟ್ಟಿ ಅವರು ಭಜನಾ ತಂಡದವರನ್ನು ಗೌರವಿಸಿದರು. ಅರ್ಚಕ ರಮೇಶ್ ಉಪಾಧ್ಯಾಯರು ದೀಪ ಬೆಳಗಿಸಿ ಪ್ರಸಾದವನನ್ನಿತ್ತರು. ಸಮಾಜಸೇವಕ ಮೋಹನ್ ಬೆಜ್ಜ ಮತ್ತು ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು.