ಶಿಲ್ಲಾಂಗ್ : ಮೇಘಾಲಯದಲ್ಲಿನ 443 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಗಡಿಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿದೆ. ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದಾರೆ ಎಂಬ ಆರೋಪಗಳನ್ನು ಅದು ಅಲ್ಲಗಳೆದಿದೆ.

ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷದ ನಾಯಕ ಇಶಾಕ್ ಅಲಿ ಖಾನ್ ಪನ್ನಾ ಅವರು ಬಾಂಗ್ಲಾದೇಶದಿಂದ ತಪ್ಪಿಸಿಕೊಳ್ಳುವ ಯತ್ನದ ಭಾಗವಾಗಿ ಮೇಘಾಲಯದ ಬೆಟ್ಟವೊಂದನ್ನು ಏರುವ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟರು ಎಂದು ಬಾಂಗ್ಲಾದ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ ನಂತರ ಬಿಎಸ್‌ಎಫ್ ಈ ಸ್ಪಷ್ಟನೆ ನೀಡಿದೆ.
'ಭಾರತ-ಬಾಂಗ್ಲಾ ಗಡಿಯಲ್ಲಿ ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸುತ್ತಿಲ್ಲ. ಪನ್ನಾ ಅವರ ಸಾವಿನ ಕುರಿತ ಸುದ್ದಿಯನ್ನು ತಿರುಚಲಾಗಿದೆ. ಅಕ್ರಮ ಒಳನುಸುಳುವಿಕೆ ಅಥವಾ ಭಾರತದ ಭದ್ರತೆಗೆ ಧಕ್ಕೆ ಉಂಟುಮಾಡುವ ಯಾವುದೇ ಯತ್ನಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುತ್ತದೆ' ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.