ಕಾಸರಗೋಡು: ನೆಲ್ಲಿಕಟ್ಟೆ ಸನಿಹದ ಪಾಂಬಾಚಿಕಡವು ನಿವಾಸಿ, ಕಾಸರಗೋಡಿನ ಬ್ಯಾಂಕ್ ಒಂದರ ಪಿಗ್ಮಿ ಏಜೆಂಟ್ ರಮೇಶ್ ಬಿ.ಎ(50)ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ರಮೇಶ್ ಅವರ ಸ್ಕೂಟರ್ ಕಾಸರಗೋಡು ಚಂದ್ರಗಿರಿ ಹೊಳೆ ಸನಿಹ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಮೇಶ್ ಅವರ ಹೊಳೆಗೆ ಹಾರಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು, ಪೊಲೀಸ್, ಅಗ್ನಿಶಾಮಕ ದಳ ಹಾಗೂ ಊರವರ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ.
ಸ್ಕೂಟರ್‍ನಲ್ಲಿ ಪಿಗ್ಮಿ ಸಂಗ್ರಹದ ಹಣ, ಮೊಬೈಲ್, ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಮೇಶ್ ಅವರು ಗುರುವಾರ ರಆತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಇವರ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.