ಉಪ್ಪಳ: ಹೆಚ್ಚಿನ ಪಂಚಾಯಿತಿಗಳು ಜನಪರವಾದ ಗ್ರಾಮಬಂಡಿ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.ಕುಂಬಳೆ ಗ್ರಾ.ಪಂ.ನಲ್ಲಿ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ ಎಂದು ಸೂಚಿಸಿದರು.
ಅವರು ಮಂಜೇಶ್ವರ ಮಂಡಲ ಮಟ್ಟದ ಸಾರ್ವಜನಿಕ ಜನಪರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀಸಾಮಾನ್ಯನ ವಾಹನ ಹಾಗೂ ಸುಗಮ ಪ್ರಯಾಣ ಸೌಲಭ್ಯವಾಗಿರುವ ಬಸ್‍ಗಳು ಎಲ್ಲ ಪ್ರದೇಶಗಳಿಗೂ ತಲುಪಬೇಕು ಎಂದು ಶಾಸಕರು ತಿಳಿಸಿದರು.
ಸರ್ಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮದ ಅಂಗವಾಗಿ, ಪ್ರಯಾಣ ಸಮಸ್ಯೆಯಿರುವ ಪ್ರದೇಶಗಳಲ್ಲಿ ಖಾಸಗಿ ಸ್ಟೇಜ್ ಕ್ಯಾರೇಜ್ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಮಾರ್ಗ ಪ್ರಸ್ತಾವನೆ ಚರ್ಚೆ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಮಂಗಲ್ಪಾಡಿ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ರುಬೀನಾ ಮತ್ತು ಮಂಜೇಶ್ವರ ಎಸ್ ಐ ಪಿಯು ಸಲೀಂ, ಕುಂಬಳೆ ಎಎಸ್ ಐ ಪ್ರಕಾಶನ್ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿಪ್ರಸಾದ್ ಸ್ವಾಗತಿಸಿ, ಕಾಸರಗೋಡು ಆರ್‍ಟಿಒ ಹಿರಿಯ ಅಧೀಕ್ಷಕ ಕೆ. ವಿನೋದ್ ಕುಮಾರ್ ವಂದಿಸಿದರು.