ಕಾಸರಗೋಡು: ಕೇರಳ ಮಹಿಳಾ ಆಯೋಗವು ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿನ ತಾಯಂದಿರಿಗೆ ಈ ತಿಂಗಳು ಸಾರ್ವಜನಿಕ ಅದಾಲತ್ ನಡೆಸಲಿದೆ ಎಂದು ಮಹಿಳಾ ಆಯೋಗದ ಸದಸ್ಯೆ ಅಡ್ವ.ಪಿ. ಕುಂಞÂ ಆಯಿಷಾ ಹೇಳಿದರು. ಇದು ಹದಿನಾಲ್ಕು ಜಿಲ್ಲೆಗಳ ವಿಶೇಷತೆಗಳನ್ನು ಪತ್ತೆಮಾಡುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅದಾಲತ್ ನಡೆಸುವ ಒಂದು ಭಾಗವಾಗಿದೆ ಎಂದರು.
ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಆಯೋಗದ ಜಿಲ್ಲಾ ಅಧಿವೇಶನದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕೌಟುಂಬಿಕ ಸಂಬಂಧಗಳಲ್ಲಿ ಕ್ಷುಲ್ಲಕ ಸಮಸ್ಯೆಗಳನ್ನು ಕೂಡ ಜಟಿಲಗೊಳಿಸುವ ಪ್ರವೃತ್ತಿಯನ್ನು ಆಯೋಗವು ಗಮನಿಸಿದೆ. ಇಂದಿನ ಸಭೆಯಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವನ್ನು ಪರಿಗಣಿಸಲಾಯಿತು. ಪತಿ-ಪತ್ನಿಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮಾತನಾಡಿ ಬಗೆಹರಿಸುವ ಬದಲು ಇಬ್ಬರ ನಡುವೆ ಪೈಪೋಟಿ ಎಂಬಂತೆ ನೋಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದರಿಂದ ಕೌಟುಂಬಿಕ ಸಮಸ್ಯೆಗಳು ಜಟಿಲವಾಗುತ್ತಿವೆ ಎಂದು ಆಯೋಗದ ಸದಸ್ಯರು ತಿಳಿಸಿದರು. ಇದನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಸಲಹೆ ನೀಡುವುದಾಗಿ ಆಯೋಗದ ಸದಸ್ಯರು ತಿಳಿಸಿದರು.
ಸಭೆಯಲ್ಲಿ ಒಟ್ಟು 39 ದೂರುಗಳನ್ನು ಪರಿಗಣಿಸಲಾಗಿದೆ. ಎರಡು ದೂರುಗಳನ್ನು ಇತ್ಯರ್ಥಗೊಳಿಸಲಾಯಿತು. ನಾಲ್ಕು ದೂರುಗಳ ಕುರಿತು ವರದಿ ಕೇಳಲಾಗಿದೆ. 37 ದೂರುಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್ಪಿ ಉತ್ತಮದಾಸ್, ಅಡ್ವ. ಪಿ. ಸಿಂಧು, ಮಹಿಳಾ ಸೆಲ್ ಎಸ್ ಐ ಎಂ.ಶರಣ್ಯ, ವನಿತಾ ಸೆಲ್ ಎ.ಎಸ್.ಐ.ಟಿ. ಶೈಲಜಾ, ಕುಟುಂಬ ಸಲಹೆಗಾರ್ತಿ ರಮ್ಯಮೋಳ್ ಮತ್ತಿತರರು ಭಾಗವಹಿಸಿದ್ದರು.