ಕಾಸರಗೋಡು: ಸರ್ವಶಿಕ್ಷ ಕೇರಳ, ಹೊಸದುರ್ಗ ಬಿಆರ್‌ಸಿ ಹಾಗೂ ಬಾನಂ ಸರಕಾರಿ ಪ್ರೌಢಶಾಲೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾನಂ ಸ್ಥಳೀಯ ಕಲಿಕಾ ಕೇಂದ್ರವು ಓಣಂಗೆ ಒಂದು ಬುಟ್ಟಿ ಹೂವು ಎಂಬ ಉದ್ದೇಶದಿಂದ ಚೆಂಡುಮಲ್ಲಿಗೆ ಕೃಷಿ ಆರಂಭಿಸಿದೆ.
ಪರಪ್ಪ ಬ್ಲಾಕ್ ಪಂಚಾಯಿತಿ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಹೂವಿನ ನಾಟಿಗೆ ಚಾಲನೆ ನೀಡಿದರು. ಹೊಸದುರ್ಗ ಬಿ.ಪಿ.ಸಿ ಡಾ.ಕೆ.ವಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಮನೋಜ್ ಕುಮಾರ್, ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಕೆ.ಭಾಗ್ಯೇಶ್, ಅನೂಪ್ ಪೆರಿಯಾಲ್, ಎಂ.ಲತಾ, ಟಿ.ಎನ್.ಪ್ರವೀಣಕುಮಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸಿ.ಕೋಮಲವಳ್ಳಿ ಸ್ವಾಗತಿಸಿದರು. ವಿ.ಎನ್.ಮಿನಿ ವಂದಿಸಿದರು.