ತಿರುವನಂತಪುರಂ: ತಿರುವನಂತಪುರದಲ್ಲಿ ಮತ್ತೊಂದು ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ಪತ್ತೆಯಾಗಿದೆ. ನವೈಕುಳಂನ 24 ವರ್ಷದ ಮಹಿಳೆಗೆ ಈ ಕಾಯಿಲೆ ಇರುವುದು ಕಂಡುಬಂದಿದೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಬಾಧಿಸಿದೆ.
ನೆಲ್ಲಿಮುಡು ಮತ್ತು ಪೇರೂರ್ಕಡ ನಿವಾಸಿಗಳಿಗೆ ಈ ಸೋಂಕು ಪತ್ತೆಯಾದ ಬೆನ್ನಿಗೇ ಮೂರನೇ ವ್ಯಕ್ತಿಯೊಬ್ಬರಿಗೀಗ ರೋಗ ದೃಢಪಟ್ಟಿದೆ. ಇದರೊಂದಿಗೆ ತಿರುವನಂತಪುರಂನಲ್ಲಿ ಅಮೀಬಿಕ್ ಎನ್ಸೆಫಾಲಿಟಿಸ್ ಪೀಡಿತರ ಸಂಖ್ಯೆ ಎಂಟಕ್ಕೆ ಏರಿದೆ. ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ನೆಯ್ಯಾಟಿಂಗರ ಕನ್ನರವಿಳ ಪುತಮಕೋಟ್ ಮೂಲದ ಅಖಿಲ್ (27) ಅನಾರೋಗ್ಯದಿಂದ ಕಳೆದ ತಿಂಗಳು 23 ರಂದು ಮೃತಪಟ್ಟಿದ್ದರು.
ಅಖಿಲ್ ಸ್ನೇಹಿತರು ಸೇರಿ ಇನ್ನೂ 5 ಮಂದಿಗೆ ಸೋಂಕು ತಗುಲಿತ್ತು. ಕನ್ನರವಿಳ ಕಾವಿಲ್ ಕೆರೆಯಲ್ಲಿ ಸ್ನಾನ ಮಾಡಿದವರು ಇವರು. ಆರೋಗ್ಯ ಇಲಾಖೆ ನೀರಿನ ಮಾದರಿ ಸಂಗ್ರಹಿಸಿದ್ದು, ಫಲಿತಾಂಶ ಬರಬೇಕಿದೆ.